ಉಪೇಂದ್ರ ಅಭಿನಯದ, ಆರ್.ಚಂದ್ರು ನಿರ್ದೇಶನದ ಕಬ್ಜಾ ಸಿನಿಮಾ ಚಿತ್ರೀಕರಣದಲ್ಲಿ ನಟ ಸುದೀಪ್ ಡಿಸೆಂಬರ್ 15 ರಿಂದ ಪಾಲ್ಗೊಳ್ಳಲಿದ್ದಾರೆ. ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿರುವ ಕಬ್ಜಾ ರೆಟ್ರೋ ಲುಕ್ಕನ್ನು ಹೊಂದಿದೆ.
ಕಬ್ಜಾ ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಭಕ್ಷಿ ಎನ್ನುವ ಮಾಫಿಯಾ ದೊರೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೂಲಕ ಉಪೇಂದ್ರ ಮತ್ತು ಸುದೀಪ್ ಎರಡನೇ ಬಾರಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಮುಕುಂದ ಮುರಾರಿ ಸಿನಿಮಾದಲ್ಲಿ ಅವರಿಬ್ಬರೂ ಜೊತೆಯಾಗಿ ನಟಿಸಿದ್ದರು.
ಕಬ್ಜಾ ಸಿನಿಮಾವನ್ನು ಚಂದ್ರು ಅವರೇ ನಿರ್ಮಾಣ ಮಾಡುತ್ತಿದ್ದು ಎಂಟಿಬಿ ನಾಗರಾಜ್ ಅವರು ಪ್ರಸ್ತುತ ಪಡಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನೀಡುತ್ತಿರುವುದು ಕಬ್ಜಾ ಚಿತ್ರದ ವಿಶೇಷ.
****