17.8 C
Bengaluru
Saturday, December 10, 2022
spot_img

ಡಿಸೆಂಬರ್ 17ರಂದು Zee5ಯಲ್ಲಿ “ಕನ್ನಡಿಗ” ರಿಲೀಸ್‌.

ಕ್ರೇಜಿಸ್ಟಾರ್ ಡಾ||ರವಿಚಂದ್ರ.ವಿ ನಾಯಕರಾಗಿ ನಟಿಸಿರುವ “ಕನ್ನಡಿಗ” ಚಿತ್ರ ಡಿಸೆಂಬರ್ 17ರಂದು Zee5 ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.ಪೀರಿಯಡ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು “ಜಟ್ಟ”,”ಮೈತ್ರಿ” ಚಿತ್ರಗಳ ಖ್ಯಾತಿಯ ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ. ರಚನೆ ಕೂಡ ಗಿರಿರಾಜ್ ಅವರದೆ.

ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಕಲಾ‌ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ‌ಸಾಹಸ ನಿರ್ದೇಶನ‌ ಈ ಚಿತ್ರಕ್ಕಿದೆ‌.

ಡಾ||ರವಿಚಂದ್ರ.ವಿ, ಪಾವನ, ಜೀವಿಕ, ಜಮ್ಮಿ ಅಲ್ಟರ್, ಬಾಲಾಜಿ ‌ಮನೋಹರ್,‌ ರಾಕ್ ಲೈನ್ ವೆಂಕಟೇಶ್, ಶೃಂಗ, ಮೈತ್ರಿ ಜಗ್ಗ ಮುಂತಾದವರು “ಕನ್ನಡಿಗ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles