ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ರಚಿತಾ ರಾಮ್ ನಟಿಸಿದ್ದ ಐ ಲವ್ ಯೂ ಸಿನಿಮಾ ಹಾಟ್ ಸಾಂಗ್, ಸಾಕಷ್ಟು ಕಾಂಟ್ರೋವರ್ಷಿ ಮಾಡಿಕೊಂಡಿತ್ತು. ಈ ಹಾಡಿನ ಗಲಾಟೆ ಮುಗಿದ ಬಳಿಕ ಡಿಂಪಲ್ ಕ್ವೀನ್ ಮತ್ತೆ ತಾವು ಇಂಥ ಪಾತ್ರಗಳನ್ನ, ಸೀನ್‌ಗಳನ್ನ, ಸಾಂಗ್‌ನಾಗಲಿ, ಸೀನ್‌ಗಳಿರೋ ಸಿನಿಮಾಗಳನ್ನಾಗ್ಲಿ ಮಾಡಲ್ಲ ಅಂತ ಹೇಳಿದ್ರು ರಚಿತಾ. ಆದ್ರೆ ಕಳೆದ ಕೆಲ ದಿನಗಳ ಹಿಂದೆ ರಿಲೀಸ್ ಆದ ರಚ್ಚು ಐ ಲವ್ ಯೂ ಸಿನಿಮಾದ ಹಾಡೊಂದರಲ್ಲಿ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರು ರಚ್ಚು. ಇದಕ್ಕೆ ಸಮರ್ಥನೆ ಕೊಟ್ಟು, ಈ ಸಿನಿಮಾದ ಕಥೆ ಎಕ್ಸ್‌ಪೆಕ್ಟ್ ಮಾಡಿತ್ತು ಹಾಗಾಗಿ ಮಾಡಿದೆ ಅಂದಿದ್ರು.
ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಈ ಹಾಡಿನಲ್ಲಿ ಮಾತ್ರವಲ್ಲ, ಸಿನಿಮಾದಲ್ಲೂ ಹಸಿ ಬಿಸಿ ರೊಮ್ಯಾಂಟಿಕ್ ಸೀನ್‌ಗಳಿವೆ ಇವೆ ಅಂದಿದ್ದಾರೆ. ಸಿನಿಮಾ ಶುರು ಮಾಡುವ ಮೊದಲೇ ರಚಿತ ಅವರಿಗೆ ಈ ಸಿನಿಮಾದ ಕಥೆ ಹೇಳಿದ್ದೆ, ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯಾಗಿದ್ದು, ರೊಮ್ಯಾಂಟಿಕ್ ಕಪಲ್ ನಡುವೆ ನಡೆಯುವ ಕಥೆಯಾದ್ದರಿಂದ ರೊಮ್ಯಾಂಟಿಕ್ ಸೀನ್‌ಗಳು ಇದ್ದೇ ಇರ್ತವೆ ಅಂತ ಹೇಳಿದ್ದೆ. ಇದಕ್ಕೆ ರಚಿತಾ ರಾಮ್ ಕೂಡ ಒಪ್ಪಿಗೆ ಅಂದಿದ್ರು. ಸಿನಿಮಾದ ಥ್ರಿಲ್ಲರ್ ಕಥೆಗೆ ಪೂರಕವಷ್ಟೆ ಶೂಟ್ ಮಾಡಿದ್ದ, ಪ್ರಮೋಷನ್‌ಗಾಗಿ ಏನನ್ನು ಮಾಡಿಲ್ಲ ಅಂದಿದ್ದಾರೆ.