ಇದೇ ಡಿಸೆಂಬರ್ 17ರಂದು ತೆರೆ ಕಾಣಲಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ದ ಪ್ರಿ ರಿಲೀಸಿಂಗ ಇವೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್ ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಪುಷ್ಪ ಅಂದ್ರೆ ಪ್ಲವರ್ ಅಂದಕೊಂಡರಾ ಪವರ್ ಎಂದು ಪುಷ್ಪರಾಜನ ಡೈಲಾಗ್ ಹೇಳಿ ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ನಿರ್ದೆಶಕ ಸುಕುಮಾರ್ ಹಾಗೂ ತಂತ್ರಜ್ಞರಿಗೆ ಧನ್ಯವಾದ ಅರ್ಪಿಸುತ್ತಾ ಅಲ್ಲು ಅರ್ಜುನ್ ರವರಿಗೆ ವಿಶೇಷ ಧನ್ಯವಾದ ಅರ್ಪಿಸಿದರು. ಅಲ್ಲದೇ ಕನ್ನಡದ ಹುಡುಗಿ ರಶ್ಮಿಕಾ ಸೆಟ್ ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದರು ಎಂದು ಹೇಳುತ್ತಾ ಕನ್ನಡದ ಅಭಿಮಾನಿಗಳು ಪುಷ್ಪ ಚಿತ್ರವನ್ನು ಕನ್ನಡದಲ್ಲೇ ನೋಡಬಹುದು ಎಂದರು.
ಡಾಲಿ ಧನಂಜಯ್ ಈ ಚಿತ್ರದಲ್ಲಿ ಜಾಲಿ ಎಂಬ ಪಾತ್ರವನ್ನು ಮಾಡಿದ್ದು, ನಾಯಕ ನಟನಾಗಿ ಅಲ್ಲು ಅರ್ಜುನ್ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.