ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ ಮುಂದಿನ ಸಿನಿಮಾ ಮಾರ್ಟಿನ್ ಯಾವುದೇ ಸಿನಿಮಾ ರಿಮೇಕ್ ಆಗಿರಲ್ಲ, ಇದೊಂದು ಸ್ವಮೇಕ್ ಸಿನಿಮಾ ಅಂತ ಧ್ರುವಾ ಸರ್ಜಾ ಕನ್ನಡ ಪಿಚ್ಚರ್ಗೆ ಹೇಳಿದ್ದಾರೆ. ಅದ್ಧೂರಿ ಸಿನಿಮಾ ಮೂಲಕ ಕನ್ನಡ ಫಿಲಂ ಇಂಡಸ್ಟ್ರಿಗೆ ಆಕ್ಷನ್ ಪ್ರಿನ್ಸ್ರನ್ನ ಕರೆತಂದ ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳ್ತಿರೋ ಮಾರ್ಟಿನ್ ಮತ್ತೊಂದು ಆಕ್ಷನ್ ಧಮಾಕಾ ಆಗಿದ್ದು, ಸಿನಿಮಾದ ಸುಮಾರು ಶೇ.೪೫ ಶೂಟಿಂಗ್ ಕಂಪ್ಲೀಟ್ ಆಗಿದೆ ಅಂತ ಮಾಹಿತಿ ನೀಡಿದ್ದಾರೆ.
ಅಭಿಮಾನಿಗಳನ್ ಮೀಟ್ ಮಾಡುವ ಸಲುವಾಗಿ ಇಂದು ಮೀಸಲಿಟ್ಟು ಮನೆಬಳಿಗೆ ಬಂದ ಫ್ಯಾನ್ಸ್ ಜೊತೆ ತಮ್ಮ ಸಂಡೇ ಕಳೆದ ಧ್ರುವಾ ಸರ್ಜಾ ಇನ್ಮುಂದೆ ವರ್ಷಕ್ಕೆ ಒಂದು ಸಿನಿಮಾ ಅಂತ ಮಾಡದೇ, ಹೆಚ್ಚು ಸಿನಿಮಾಗಳನ್ನ ಮಾಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ರು. ಅಭಿಮಾನಿಗಳು ತಮ್ಮ ಮಾತಿಗೆ ಬೆಲೆ ಕೊಟ್ಟು ಮಾಸ್ಕ್ ಧರಿಸಿ, ತಮ್ಮನ್ನ ಭೇಟಿ ಮಾಡೋಕೆ ಬಂದಿರೋದು ಖುಷಿ ಕೊಡ್ತು. ಇನ್ಮುಂದೆಯೂ ಹೀಗೇ ಆಗಾಗ ಅಭಿಮಾನಿಗಳನ್ನ ಮೀಟ್ ಮಾಡ್ತಾ ಇರ್ತೀನಿ ಅಂದ್ರು ಧ್ರುವಾ ಸರ್ಜಾ.