ಪ್ರತಿ ನಿತ್ಯ ಸೋಷಿಯಲ್ ಮೀಡಿಯಾಗಳಲ್ಲಿ, ಅಲ್ಲಿ ಇಲ್ಲಿ ಶೂಟಿಂಗ್‌ಗಳಲ್ಲಿ, ಹೊರೆಗೆಲ್ಲಾ ಅಭಿಮಾನಿಗಳನ್ನ ಮೀಟ್ ಮಾಡುವ ಧ್ರುವ ಸರ್ಜಾ, ಈ ಬಾರಿಯ ಬರ್ತ್‌ಡೇ ದಿನ ಅಕ್ಟೋಬರ್‌ನಲ್ಲಿ ಇನ್ನೂ ಕೊರೊನಾ ನಿಯಮಗಳು ಜಾರಿಯಲ್ಲಿದ್ದ ಕಾರಣ ಅಭಿಮಾನಿಗಳನ್ನ ಮೀಟ್ ಮಾಡಲು ಆಗಿರ್ಲಿಲ್ಲ. ಇದೇ ಕಾರಣಕ್ಕೆ ಇವತ್ತು ಅಭಿಮಾನಿಗಳನ್ನ ತಮ್ಮ ಮನೆಯೆ ಬಳಿಯೇ ಭೇಟಿ ಮಾಡಿದ್ದಾರೆ.
ಬೆಳಗ್ಗೆಯಿಂದಲೇ ಜಮಾಯಿಸಿರೋ ಅಭಿಮಾನಿಗಳು ತಮ್ಮ ನೆಚ್ಚಿನ ಆಕ್ಷನ್ ಪ್ರಿನ್ಸ್‌ಗೆ ವಿಶ್ ಮಾಡ್ತಾ ಇದ್ದಾರೆ, ಜೈಕಾರಾ ಹಾಕ್ತಾ ಇದ್ದಾರೆ. ಅವ್ರ ಸಿನಿಮಾದ ಡೈಲಾಗ್ಸ್ ಹೇಳಿ ಸಂಭ್ರಮಿಸ್ತಾ ಇದ್ದಾರೆ. ಆಕ್ಷನ್ ಪ್ರಿನ್ಸ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡ್ತಾ ಇದ್ದಾರೆ.
ಸದ್ಯ ತಮ್ಮ ಮುಂದಿನ ಸಿನಿಮಾ ಮಾರ್ಟಿನ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಧ್ರುವಾ ಸರ್ಜಾ, ಶೂಟಿಂಗ್ ಬಿಡುವು ಇರೋ ಕಾರಣ ಇಂದು ಭಾನುವಾರ ಅಭಿಮಾನಿಗಳನ್ನ ಮೀಟ್ ಮಾಡಿ, ತಮ್ಮ ಮುಂದಿನ ಸಿನಿಮಾದ ವಿವರಗಳನ್ನ ಹಂಚಿಕೊಳ್ತಾ ಇದ್ದಾರೆ. ಅಭಿಮಾನಿಗಳು ಮಾರ್ಟಿನ್ ಸಿನಿಮಾದ ಲುಕ್‌ಗೆ ಫಿದಾ ಆಗಿದ್ದು,ಧ್ರುವ ಮುಂದಿನ ಸಿನಿಮಾಕ್ಕೆ ಕಾಯ್ತಾ ಇರೋದಾಗಿ ಹೇಳಿಕೊಂಡಿದ್ದಾರೆ.