‘ಭಾವಚಿತ್ರ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು, ಯುವ ಪಡೆಗಳು ಸೇರಿಕೊಂಡು ನಿರ್ಮಿಸಿರುವಂತಹ “ಭಾವಚಿತ್ರ” ಸಿನಿಮಾ ಇದೊಂದು ವಿಭಿನ್ನ ಪ್ರಯತ್ನದ ಚಿತ್ರವಾಗಿದ್ದು, ಪ್ರಮುಖ ಪಾತ್ರದಲ್ಲಿ ಕಿರುತೆರೆಯಲ್ಲಿ ಟಿ.ಎನ್.ಸೀತಾರಾಂ ನಿರ್ದೇಶನದ ಮಗಳು ಜಾನಕಿ ಸೀರಿಯಲ್ ಮೂಲಕ ಮನೆಮಾತಾಗಿರುವ ಚಿಕ್ಕಮಗಳೂರಿನ ‘ಗಾನವಿ ಲಕ್ಷ್ಮಣ್’ ನಾಯಕಿಯಾಗಿದ್ದು ‘ಭಾವಚಿತ್ರ’ಸಿನಿಮಾದ ನಾಯಕಿಯಾಗಿ ಅಭಿನಯಿಸಿದ್ದಾರೆ.
ಈ ಚಿತ್ರದ ಕಥೆ ಈಕೆಯ ಸುತ್ತ ಸಾಗುತ್ತದೆ. ಒಂದೂರಲ್ಲಿ ಹಳೆಯ ದೇವಸ್ಥಾನ, ಅಲ್ಲಿನ ಶಿಲ್ಪಕಲೆಯ ಬಗ್ಗೆ ಅಧ್ಯಯನ ನಡೆಸುವ ಹುಡುಗಿಯಾಗಿ ಗಾನವಿ ಕಾಣಿಸಿಕೊಂಡಿದ್ದಾರೆ.ಕಾರ್ಪೋರೇಟ್ ಕಂಪೆನಿಯಲ್ಲಿ ಫೋಟೋಗ್ರಾಫರ್ ಆಗಿರುವ ಕಥಾ ನಾಯಕ ಚಕ್ರವರ್ತಿ ರೆಡ್ಡಿ . ಶಾಂತಿ ಬಯಸಲು ದೂರದ ಊರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿಯೊಡನೆ ಪ್ರೀತಿ ಚಿಗುರುತ್ತದೆ. ಮುಂದೆ ಸಾಕಷ್ಟು ತಿರುವುಗಳು ಬರುತ್ತದೆ.
ಇತಿಹಾಸಕ್ಕೆ ಸಂಬಂಧಿಸಿದ ಎಳೆಯೊಂದು ಕೂಡ ಇದರಲ್ಲಿ ಇದೆಯಂತೆ. ಅದು ಏನೆಂಬುದನ್ನು ಚಿತ್ರ ನೋಡಬೇಕು. 2017ರಲ್ಲಿ ’ಅವಾಹಯಾಮಿ’ ನಿರ್ದೇಶನ ಮಾಡಿದ್ದ ಗಿರೀಶ್‌ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತಾರಗಣದಲ್ಲಿ ಗಿರೀಶ್ ಬಿಜ್ಜಳ, ಶ್ರೀನಾಥ್‌ರಾವ್, ರಜತ್ ಮಯಿ ಮುಂತಾದವರಿದ್ದಾರೆ.
ನಾಲ್ಕು ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ರಿತೇಶ್‌ಕುಮಾರ್ ಸಂಕಲನ, ಅಜಯ್ ಜೈ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಗುಡಿಬಂಡೆಯಲ್ಲಿ ಚಿತ್ರೀಕರಣ ನಡೆದಿದೆ.
ಈ ಚಿತ್ರದಲ್ಲಿ ಹಾಡನ್ನು ಹಾಡಿರುವ ಗಾಯಕ ರಾಜೇಶ್ ಕೃಷ್ಣನ್ ರವರು ಪ್ರಚಾರದ ಸಲುವಾಗಿ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಮಾದ್ಯಮದವರಿಗೆ ಎರಡು ಹಾಡುಗಳನ್ನು ತೋರಿಸಲಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ಭಾವಚಿತ್ರ ಸಿನಿಮಾವನ್ನ ತೆರೆ ಮೇಲೆ ತರಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದೆಯಂತೆ.
****