ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ನಿನ್ನೆ (ಡಿ.9) ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿತ್ತು. ಇದೀಗ ಮತ್ತೆ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಛೆ.. ನಾನು ಶ್ರಮ ಹಾಕಿದ್ದೇನೆ, ಕನಿಷ್ಠ ಈಗ ನಮಗೆ ಟಾಸ್ಕ್ ಮಾಸ್ಟರ್ ಯಾರೆಂದು ತಿಳಿದಿದೆ. ಪುರುಷರು ಫೋಟೋ ತೆಗೆಯುವ ಸಂದರ್ಭದಲ್ಲಿ ಯಾಕೆ ತುಂಬಾ ಕಷ್ಟಪಡುತ್ತಾರೆ ಯಾವಾಗಲೂ ಎಂದು ಬರೆದುಕೊಂದಿದ್ದಾರೆ. ಫೋಟೋನಲ್ಲಿ ಯಶ್, ರಾಧಿಕಾ ಬೋಟ್‍ನಲ್ಲಿ ಇರುವಂತೆ ಕಾಣಿಸುತ್ತದೆ. ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ಕಿಸುವ ವೇಳೆ ಯಶ್ ಮೊದಲ ಫೋಟೋನಲ್ಲಿ ಮುಖದ ಮೇಲೆ ಟವೆಲ್ ಹಾಕಿ ಕುಳಿತಿದ್ದಾರೆ. ತಲೆ ಮೇಲೆ ಕೈ ಇಟ್ಟು, ಕಳ್ಳನಂತೆ ಇಣುಕಿ ನೋಡುವಂತೆ, ಕೊನೆಯ ಫೋಟೋದಲ್ಲಿ ರಾಧಿಕಾ ಅವರ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ದಂಪತಿಯ ಈ ಕ್ಯೂಟ್ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ಸ್ಟಾ ಗ್ರಾಮ್ ನಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್ ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ನಿನ್ನೆ ಶೇರ್ ಮಾಡಿದ್ದು, ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಯಶ್ ಗೆ ಅರ್ಪಿಸಿದ್ದರು. ಈ ಸಾಲುಗಳ ಮೂಲಕ ಯಶ್ ನನಗೆ ಎಷ್ಟು ಪರ್ಫೆಕ್ಟ್ ಜೋಡಿ ಎಂದು ಹೇಳಿದ್ದರು, ಇದೀಗ ಯಶ್ ಅವರ ಜೊತೆಗೆ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.
ಈ ಜೋಡಿ 2016ರ ಡಿಸೆಂಬರ್ 9 ರಂದು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಐರಾ ಎಂದು ಹೆಸರಿಟ್ಟರು. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಆ ಮಗುವಿಗೆ ಯಥರ್ವ್ ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ.
****