ನಾಳೆ ಶುಕ್ರವಾರ, ಸ್ಯಾಂಡಲ್ ವುಡ್ ಸಿನಿ ಪ್ರೀಯರಿಗೆ ರಸದೌತಣ. ಹೊಸಬರ ಐದು ಸಿನಿಮಾ ಸೇರಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 6 ಸಿನಿಮಾಗಳು ತೆರೆಗೆ ಬರುತ್ತಿವೆ. ಆ ಚಿತ್ರಗಳು ಯಾವುವು ಗೊತ್ತಾ ಇಲ್ಲಿದೆ ನೋಡಿ.
ದೃಶ್ಯ-2: ಪಿ ವಾಸು ನಿರ್ದೇಶನದ ‘ದೃಶ್ಯ-2’ ಸಿನಿಮಾ ಟ್ರೈಲರ್ ಮೂಲಕವೇ ಸಖತ್ ಕುತೂಹಲ ಮೂಡಿಸಿದೆ. 2014ರಲ್ಲಿ ತೆರೆಗೆ ಬಂದ ದೃಶ್ಯ ಚಿತ್ರ ಮುಂದುವರಿದ ಭಾಗ ಈ ದೃಶ್ಯ-2 ಸಿನಿಮಾ. ರವಿಚಂದ್ರನ್ ಜೊತೆಗೆ ನವ್ಯಾ ನಾಯರ್, ಆರೋಹಿ, ಉನ್ನತಿ, ಅನಂತ್ನಾಗ್ ಸೇರಿ ಹಲವರು ನಟಿಸಿದ್ದಾರೆ.
ಕಾನ್ಸೀಲಿಯಂ : ಬರೀ ಟೆಕ್ಕಿಗಳೇ ಸೇರಿದ ಮಾಡಿರುವ ಕಾನ್ಸೀಲಿಯಂ ಸಿನಿಮಾ ಕೂಡ ನಾಳೆ ರಿಲೀಸ್ ಆಗುತ್ತಿದೆ. ಸೈನ್ಸ್ ಫಿಕ್ಷನ್ಸ್ ಮತ್ತು ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನಾಯಕನೇ ನಿರ್ದೇಶಕ. ನಿರ್ದೇಶ ಕ ಪತ್ನಿಯೇ ನಿರ್ಮಾಪಕಿ.
ಎರಡು ಸಾವಿರದ ಇಪ್ಪತ್ತು ಗೋಪಿಕೆಯರು: ಈ ಶೀರ್ಷಿಕೆಯೇ ಸಖತ್ ಡಿಫ್ರೆಂಟ್ ಆಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಹಾಡನ್ನು ನೋಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಷ್ಟಪಟ್ಟಿದ್ದರು. ಈ ಚಿತ್ರದಲ್ಲಿ ಬಾಲಾಜಿ ಶರ್ಮಾ ಮತ್ತು ಪ್ರಿಯಾಂಕ ಚಿಂಚೋಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಬ್ರೇಕ್ ಫೇಲ್ಯೂರ್: ಸಸ್ಪೆನ್ಸ್ ಥ್ರಿಲ್ಲರ್ ಬ್ರೇಕ್ ಫೇಲ್ಯೂರ್ ಸಿನಿಮಾ ಕೂಡ ನಾಳೆ ತೆರೆಕಾಣಲಿದೆ. ಆದಿತ್ ನವೀನ್ ನಿರ್ದೇಶನ ಮೊದಲ ಚಿತ್ರ ಇದಾಗಿದ್ದು, ನಾಯಕನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಕೃತಿಗೌಡ ನಾಯಕಿಯಾಗಿದ್ದಾರೆ.
ಮಡ್ಡಿ: ಈ ಚಿತ್ರಗಳ ನಡುವೆ ಮಲಯಾಳಂನಿಂದ ಕನ್ನಡಕ್ಕೆ ಡಬ್ ಆಗಿರುವ ‘ಮಡ್ಡಿ’ ಎಂಬ ಸಿನಿಮಾ ಕೂಡ ನಾಳೆ ಬಿಡುಗಡೆಯಾಗುತ್ತಿದೆ. 6 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಪ್ರಗ್ಬಲ್ ದಾಸ್ ನಿರ್ದೇಶನ ಮಾಡಿದ್ದಾರೆ. ಇನ್ನೂ ರವಿ ಬಸ್ರೂರು ಸಂಗೀತ ನೀಡಿದ್ದಾರೆ.
ಶ್ರೀ ಜಗನ್ನಾಥ ದಾಸರು: ನಾಳೆ ಮತ್ತೊಂದು ವಿಶೇಷ ಸಿನಿಮಾ ಬಿಡುಗಡೆಯಾಗುತ್ತಿದೆ. ಶ್ರೀ ಜಗನ್ನಾಥ ದಾಸರು ಎಂಬ ಭಕ್ತಿ ಪ್ರಧಾನ ಸಿನಿಮಾ ರಿಲೀಸ್ ಆಗ್ತಿದೆ. ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡಿದ್ದಾರೆ. ವಿಜಯ ಕೃಷ್ಣ ಸಂಗೀತ, ಜಿ ಎಂ ಪ್ರಹ್ಲಾದ್ ಅವರ ಚಿತ್ರಕಥೆ ಇದೆ.
****