21.8 C
Bengaluru
Friday, March 24, 2023
spot_img

‘ಬಡವ ರಾಸ್ಕಲ್’ ಜನ ಸಾಮಾನ್ಯನ ಸಿನಿಮಾ: ಧನಂಜಯ್

ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಟ್ರೇಲರ್ ಡಿಸೆಂಬರ್ ಇಂದು (ಡಿ.9) ಬಿಡುಗಡೆ ಆಗಬೇಕಿತ್ತು, ತಾಂತ್ರಿಕ ಕಾರಣಗಳಿಂದಾಗಿ 13 ಕ್ಕೆ ಬಿಡುಗಡೆಯಾಗಲಿದೆ ಎಂದು ಡಾಲಿ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾದ ಫೇಸ್ ಬುಕ್ ಖಾತೆ ಮೂಲಕ ಮಾಹಿತಿ ನೀಡಿದ್ರು.

ಬಡವ ರಾಸ್ಕಲ್’ ಚಿತ್ರಕ್ಕೆ ಹೊಸ ರೀತಿಯಲ್ಲಿ ಅಭಿಮಾನಿಗಳು ಪ್ರೋತ್ಸಾಹ ನೀಡಲು ಆರಂಭಿಸಿದ್ದು,  ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಬಗ್ಗೆಯೂ ಧನಂಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಎಳನೀರು ಗಾಡಿ, ಕಾರು ಗ್ಯಾರೇಜ್, ಬಿರಿಯಾನಿ ಹೋಟೆಲ್‌, ಆಟೋ ಚಾಲಕರವರೆಗೂ ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಇದೀಗ ‘ಬಡವ ರಾಸ್ಕಲ್‌’ ಪ್ರೊಮೋಷನ್ಸ್‌ ನಡೆಯುತ್ತಿದೆ. ಕುತೂಹಲ ಸೃಷ್ಟಿಸಿರುವ ಮತ್ತೊಂದು ವಿಚಾರವೆಂದರೆ ವೈದ್ಯರ ಪ್ರಿಸ್ಕ್ರಿಪ್ಷನ್ ನಲ್ಲೂ ಚಿತ್ರದ ಬಿಡುಗಡೆ ದಿನಾಂಕ ಮುದ್ರಿಸಿರುವುದು ಕಂಡು ಬಂದಿದೆ.

ಚಿತ್ರದ ಕುರಿತು ಏನೇ ಆಗಿದ್ದರೂ ಎಲ್ಲವೂ ಚಿತ್ರತಂಡದ ಪರಿಶ್ರಮವಾಗಿದೆ ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ.

ಬಡವ ರಾಸ್ಕಲ್ ಅನ್ನು ಶೀರ್ಷಿಕೆಯಾಗಿ ಸಲಹೆ ನೀಡಿದವರು ನನ್ನ ಸಹ ನಟ ಮತ್ತು ಸ್ನೇಹಿತ ನಾಗಭೂಷಣ್. ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಶೀರ್ಷಿಕೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಬಿಡುಗಡೆ ದಿನಾಂಕವನ್ನು ಘೋಷಿಸಲು ಜನರನ್ನು ಬಳಸಿಕೊಳ್ಳುವುದು ನನ್ನ ಸಹಾಯಕ ಮೇಕಪ್ ಕಲಾವಿದ ಗಣೇಶ್ ಅವರ ಆಲೋಚನೆಯಾಗಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ. ಈ ಕುರಿತು ನನ್ನ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದೇನೆ. ಟೀ ಹೋಟೆಲ್ ನ ಮಾಲೀಕರೊಬ್ಬರು ತಮ್ಮ ಟೀಗೆ ಬಡವ ರಾಸ್ಕೆಲ್ ಎಂದು ಹೆಸರಿಸಿದ್ದಾರೆ. ಚಿತ್ರದ ಪ್ರಚಾರವನ್ನು ಜನರೇ ಸ್ವಯಂಪ್ರೇರಿತರಾಗಿ ಮಾಡುತ್ತಿರುವುದು ಬಹಳ ಸಂತೋಷವನ್ನು ತಂದಿದೆ ಎಂದು ತಿಳಿಸಿದ್ದಾರೆ.

‘ಬಡವ ರಾಸ್ಕಲ್’ ಕಾಮನ್ ಮ್ಯಾನ್ ಚಿತ್ರವಾಗಿದ್ದು, ಮಧ್ಯಮ ವರ್ಗದ ಕೌಟುಂಬಿಕ ಮನರಂಜನೆಯಾಗಿದೆ ಮತ್ತು ಎಲ್ಲಾ ರೀತಿಯ ಪ್ರೇಕ್ಷಕರ ರಂಜಿಸಲಿದೆ ಎಂದಿದ್ದಾರೆ.

ಬಡವ ರಾಸ್ಕಲ್ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಿದ್ದು ನಾಗಭೂಷಣ್, ಪೂರ್ಣಚಂದ್ರ ಮೈಸೂರು, ತಾರಾ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ಮತ್ತು ಪ್ರೀತಾ ಜಯರಾಮ್ ಅವರ ಛಾಯಾಗ್ರಹಣವಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles