21.8 C
Bengaluru
Friday, March 24, 2023
spot_img

ಯೂಟ್ಯೂಬ್ ಗೂ ಮೊದಲು ಚಿತ್ರಮಂದಿರಗಳಲ್ಲಿ RRR ಟ್ರೇಲರ್ ರಿಲೀಸ್..

ಈ ಹಿಂದೆ ಇದ್ದ ಮಾಹಿತಿ ಪ್ರಕಾರ ಆರ್ ಆರ್ ಆರ್ ಟ್ರೇಲರ್ ಡಿ.3 ರಂದು ರಿಲೀಸ್ ಆಗಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಟ್ರೇಲರ್​ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತು. ಡಿ.9ರಂದು ಟ್ರೇಲರ್​ ಅನಾವರಣ ಮಾಡುವುದಾಗಿ ಚಿತ್ರತಂಡ ಭರವಸೆ ನೀಡಿದೆ. ಅದಕ್ಕಾಗಿ ಈಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಡವಾಗಿರುವುದರಿಂದ ಸಖತ್​ ಅದ್ದೂರಿಯಾಗಿ ಟ್ರೇಲರ್​ ಹಂಚಿಕೊಳ್ಳಲು ಪ್ಲ್ಯಾನ್​ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ರಿಲೀಸ್​ ಆಗೋಕಿಂತ ಮೊದಲೇ ಅಭಿಮಾನಿಗಳು ಇದನ್ನು ಕಣ್ತುಂಬಿಕೊಳ್ಳಬಹುದು. ಹೇಗೆ ಅಂತೀರಾ? ಉತ್ತರ ಸಿಂಪಲ್​. ಡಿ.9ರ ಬೆಳಗ್ಗೆ 10 ಗಂಟೆಗೆ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋದರೆ ‘ಆರ್​ಆರ್​ಆರ್​’ ಟ್ರೇಲರ್​ (RRR Trailer) ನೋಡಬಹುದು. ಯಾವ ಯಾವ ಥಿಯೇಟರ್​ಗಳಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಬೆಂಗಳೂರಿನ ಊರ್ವಶಿ, ಅಂಜನ್​, ಕಾವೇರಿ, ಮಾನಸ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಡಿ.9ರಂದು ಬೆಳಗ್ಗೆ 10 ಗಂಟೆಗೆ ‘ಆರ್​ಆರ್​ಆರ್​’ ಟ್ರೇಲರ್​ ಪ್ರದರ್ಶನ ಆಗಲಿದೆ. ಮೈಸೂರು, ಬಳ್ಳಾರಿ, ದಾವಣಗೆರೆ ಮುಂತಾದ ಕಡೆಗಳಲ್ಲೂ ಟ್ರೇಲರ್​ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಯೂಟ್ಯೂಬ್​ನಲ್ಲಿ ಟ್ರೇಲರ್​ ರಿಲೀಸ್​ ಆಗಲಿದೆ.

ರಾಜಮೌಳಿ ನಿರ್ದೇಶನದ ಸಿನಿಮಾಗಳು ಬಿಗ್​ ಬಜೆಟ್​ನಲ್ಲಿ ತಯಾರಾಗುತ್ತವೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಮತ್ತು ಬೃಹತ್​ ಸೆಟ್​ಗಳ ಮೂಲಕ ಅವರು ಹೊಸ ಲೋಕವನ್ನು ಕಟ್ಟಿಕೊಡುತ್ತಾರೆ. ಅದನ್ನು ಬಿಗ್​ ಸ್ಕ್ರೀನ್​ ಮೇಲೆ ನೋಡುವುದೇ ಒಂದು ವೈಭವ. ಹಾಗಾಗಿ ಟ್ರೇಲರ್ ಕೂಡ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ. 2022ರ ಜ.7ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್​ ಆಗಿದ್ದು, ಏಕಕಾಲಕ್ಕೆ ಕನ್ನಡ ವರ್ಷನ್​ ಕೂಡ ತೆರೆಕಾಣಲಿದೆ.

‘ಆರ್​ಆರ್​ಆರ್​’ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ನಾಟು ನಾಟು’ ಮತ್ತು ‘ಜನನಿ’ ಹಾಡುಗಳು ಸಖತ್​ ಸೌಂಡು ಮಾಡುತ್ತಿವೆ. ಸಿನಿಮಾ ರಿಲೀಸ್​ಗೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ನಡೆಯಲಿದೆ. ಅದಕ್ಕಾಗಿಯೂ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಈ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಆಲಿಯಾ ಭಟ್​ ನಾಯಕಿಯಾಗಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟ ಅರುಣ್​ ಸಾಗರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಬಾಹುಬಲಿ’ ಯಶಸ್ಸಿನ ನಂತರ ರಾಜಮೌಳಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿರುವುದರಿಂದ ಹೆಚ್ಚಿನ ನಿರೀಕ್ಷೆ ಇದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles