31.5 C
Bengaluru
Tuesday, March 28, 2023
spot_img

ಸೆನ್ಸಾರ್ ಮುಗಿಸಿದ ದೃಶ್ಯ 2, ಡಿಸೆಂಬರ್ 10 ರಂದು ತೆರೆಗೆ

2014 ರಲ್ಲಿ ತೆರೆಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿದ್ದ ಚಿತ್ರ “ದೃಶ್ಯ”. ಈಗ ಇದೇ ಚಿತ್ರದ ಮುಂದುವರೆದ ಭಾಗ ” ದೃಶ್ಯ 2″ ಎಂಬ ಹೆಸರಿನಿಂದ ನಿರ್ಮಾಣವಾಗಿದ್ದು, ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾ ಪತ್ರ ನೀಡಿದೆ. ಚಿತ್ರ ಡಿಸೆಂಬರ್ 10 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಪಿ.ವಾಸು ಅವರ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಹಿರಿಯ ನಟ ಅನಂತನಾಗ್, ನವ್ಯ ನಾಯರ್,ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ,  ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್, ಯತಿರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

E4 Entertainment ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ Zee ಸ್ಟುಡಿಯೋ ಮೂಲಕ ಬಿಡುಗಡೆಯಾಗುತ್ತಿದೆ.  ಸಿ.ವಿ.ಸಾರಥಿ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಜೀತು ಜೋಸೆಫ್ ಕಥೆ ಬರೆದಿದ್ದಾರೆ.

ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ , ರವಿ ಸಂತೆಹುಕ್ಲು ಅವರ ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ , ಭರತ್ ಅವರ ನಿರ್ಮಾಣ ನಿರ್ವಹಣೆ “ದೃಶ್ಯ 2” ಚಿತ್ರಕ್ಕಿದೆ‌.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles