ಮುಂದಿನ ವರ್ಷ ಏಪ್ರಿಲ್ 14ಕ್ಕೆ ತೆರೆಗೆ ಬರಲಿರೋ ಕೆಜಿಎಫ್ ಚಾಪ್ಟರ್ – 2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಮಿಂಚ್ತಾ ಇರೋ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಸಿನಿಮಾದ ಡಬ್ಬಂಗ್ ನಲ್ಲಿ ಭಾಗವಹಿಸಿದ್ದಾರೆ.
ಚಾಪ್ಟರ್ -2ರಲ್ಲಿ ತುಂಬಾನೇ ಕುತೂಹಲ ಮೂಡಿಸಿದ್ದ ಅಧೀರ ಪಾತ್ರದಲ್ಲಿ ಸಂಜಯ್ ದತ್ ಮಿಂಚ್ತಾ ಇದ್ದಾರೆ ಅನ್ನೋದೇ ಎಕ್ಸೈಟಿಂಗ್ ವಿಷ್ಯ. ಈಗಾಗ್ಲೆ ರಿಲೀಸ್ ಅಗಿರೋ ಅಧೀರನ ಲುಕ್ ಪಾತ್ರದ ಬಗ್ಗೆ ಇನ್ನಷ್ಟು ನಿರೀಕ್ಸೆ ಹೆಚ್ಚಿಸಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದ ಹಿಂದಿ ವರ್ಷನ್ ಗೆ ಸಂಜು ದಾದ ಡಬ್ಬಿಂಗ್ ಮಾಡ್ತಾ ಇದ್ದಾರೆ. ಮುಂಬೈನ ಖಾಸಗಿ ಸ್ಟುಡಿಯೋದಲ್ಲಿ ಡಬ್ಬಿಂಗ್ ನಲ್ಲಿ ಭಾಗವಹಿಸಿದ್ದಾರೆ. ಈ ಡಬ್ಬಿಂಗ್ ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಭಾಗವಹಿಸಿದ್ದು, ಡಬ್ಬಿಂಗ್ ನ ಕೆಲ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ವರ್ಷ ಅಂದ್ರೆ 2022 ರ ಬಹುನಿರೀಕ್ಷಿತ ಸಿನಿಮಾ, ಬಾಲಿವುಡ್ ಗೂ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೆಜಿಎಫ್-2. ಈ ಸಿನಿಮಾದಲ್ಲಿ ಸಂಜಯ್ ದತ್ ಜೊತೆಗೆ ಬಾಲಿವುಡ್ ನಟಿ ರವೀನಾ ಟಂಡನ್, ತೆಲುಗಿನ ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ಹೈಪ್ ಹೆಚ್ಚಿದೆ. ಸಿನಿಮಾದಲ್ಲಿ ಇನ್ನೂ ಯಾವ್ಯಾವ ಸ್ಟಾರ್ ಇದ್ದಾರೆ ಅನ್ನೋ ದೊಡ್ಡ ಕುತೂಹಲವೂ ಇದೆ. ಇದೇ ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಬರ್ತ್ ಡೇ ಇದ್ದು. ಅವತ್ತು ಸಿನಿಮಾದ ಮೊದಲ ಹಾಡು ಬಿಡುಗಡೆಯಾಗುವ ಸಾಧ್ಯತೆ ಇದೆ.
****