23.8 C
Bengaluru
Thursday, December 8, 2022
spot_img

ಪಾರ್ವತಮ್ಮ ರಾಜಕುಮಾರ್ ಎಂಬ ತೆರೆಯ ಹಿಂದಿನ ಧ್ರುವತಾರೆ

ಇಂದು ಪಾರ್ವತಮ್ಮ ರಾಜಕುಮಾರ್ ಅವರ 82 ನೇ ಜನ್ಮ ದಿನ, ಪಾರ್ವತಮ್ಮ ರಾಜಕುಮಾರ್ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಆಕೃತಿ, ಹಣೆ ತುಂಬ ಕುಂಕುಮ, ಮುಡಿಗೆ ಹೂ, ಗಂಭೀರ ಮುಖ ಭಾವ, ಮಿತ ಭಾಷಿ, ಎಲ್ಲಕ್ಕಿಂತ ಮಿಗಿಲಾಗಿ ಒಂದು ಶಿಸ್ತು ಬದ್ದ ಜೀವನಕ್ಕೆ ಮಾದರಿಯಾಗಿದ್ದರು ಪಾರ್ವತಮ್ಮ, ತಮ್ಮ ಮನೆಗೆ ಬಂದ ಯಾರೊಬ್ಬರನ್ನು ಊಟ ಮಾಡಿಸದೆ ಕಳುಹಿಸುತ್ತಿರಲಿಲ್ಲಾ , ಡಾ ರಾಜಕುಮಾರ್ ಎನ್ನುವ ಮೇರು ನಟನ ಜೀವನ ಸಂಗಾತಿ. ಇಂದು ಪಾರ್ವತಮ್ಮ ರಾಜಕುಮಾರ್ ಬದುಕಿದ್ದರೆ 82 ವರ್ಷ ವಯಸ್ಸಾಗಿರುತ್ತಿತ್ತು.ಪಾರ್ವತಮ್ಮ ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿ. ರಾಜ್‍ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳನ್ನು ವಜ್ರೇಶ್ವರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿ, ವಿತರಿಸಿದ್ದಾರೆ. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ 2017 ಮೇ.31 ರಂದು ನಿಧನರಾದರು. (6 December 1939 – 31 May 2017)

1939 ಡಿಸೆಂಬರ್ 6 ರಂದು ಮೈಸೂರಿನ ಕೆಆರ್ ನಗರದ ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಅಪ್ಪಾಜಿ ಗೌಡ ಮತ್ತು ತಾಯಿ ಲಕ್ಷ್ಮಮ್ಮ. ರಾಜ್ ಕುಮಾರ್ ಅವರ ಅತ್ತೆಯ ಹೆಸರೂ ಕೂಡ ಲಕ್ಷ್ಮಮ್ಮ ಎಂದೇ. ಪಾರ್ವತಮ್ಮ ಅವರ ತಂದೆ ಅಪ್ಪಾಜಿ ಗೌಡ ಅವರು ಸಂಗೀತ ಶಿಕ್ಷಕರಾಗಿದ್ದು, ಇವರ ಬಳಿಯಲ್ಲೇ ರಾಜ್ ಕುಮಾರ್ ಅವರೂ ಕೂಡ ಸಂಗೀತ ಅಭ್ಯಾಸ ಮಾಡಿದ್ದರು.

ಪಾರ್ವತಮ್ಮ ಅವರು ತಮ್ಮ 13ನೇ ವಯಸ್ಸಿನಲ್ಲೇ ರಾಜ್ ಕುಮಾರ್ ಅವರನ್ನು ಮದುವೆಯಾದರು. 25-06-1953 ರಂದು ಪಾರ್ವತಮ್ಮ ಹಾಗೂ ರಾಜ್ ಕುಮಾರ್ ಅವರ ವಿವಾಹ ನೆರವೇರಿತ್ತು. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ವಿವಾಹ ಕಾರ್ಯಕ್ರಮ ನೆರವೇರಿತ್ತು.

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ರಾಜ್ ಕುಮಾರ್ ಅವರು ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಅನುಭವಿಸಿದ್ದರು. ಈ ಹಂತದಲ್ಲಿ ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಬೆನ್ನೆಲುಬಾಗಿದ್ದರು. ಆದರೆ ಕ್ರಮೇಣ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾದರು. 70ರ ದಶಕದಲ್ಲಿ ವೃತ್ತಿ ಜೀವನದ ಅತ್ಯಂತ ಉತ್ತುಂಗ ಸ್ಥಿತಿಗೆ ರಾಜ್ ಕುಮಾರ್ ತಲುಪಿದ್ದರು. ಈ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಾಕಷ್ಟು ಬೇಡಿಕೆ ಇತ್ತಾದರೂ ನಿರ್ಮಾಪಕರು ಮಾತ್ರ ಕಡಿಮೆ ಸಂಭಾವನೆ ನೀಡುತ್ತಿದ್ದರು.

ಈ ಹಂತದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾದರು. ಆಗ ತಲೆ ಎತ್ತಿದ್ದೇ ಪೂರ್ಣಿಮಾ ಎಂಟರ್ ಪ್ರೈಸಸ್ ಅಥವಾ ವಜ್ರೇಶ್ವರಿ ಕಂಬೈನ್ಸ್. 1975ರಲ್ಲಿ ತಲೆ ಎತ್ತಿದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿತು. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ವತಿಯಿಂದ ನಿರ್ಮಾಣಗೊಂಡ ಮೊದಲ ತ್ರಿಮೂರ್ತಿಎಂಬ  ಚಿತ್ರದಲ್ಲಿ  ಒಂದು ಪ್ರಮುಖ ಪಾತ್ರದಲ್ಲಿ ರಾಜಕುಮಾರ್ ಅಭಿನಯಿಸಿದ್ರು. 1975ರಲ್ಲಿ ಈ ಸಂಸ್ಥೆ ನಿರ್ಮಿಸಿದ್ದ ಮೊದಲ ಚಿತ್ರ ತ್ರಿಮೂರ್ತಿ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ತಾನು ನಿರ್ಮಿಸಿದ್ದ ಪ್ರಮುಖ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ರಾಜ್‍ಕುಮಾರ್‍‍ರನ್ನು ಒಳಗೊಂಡು ತ್ರಿಮೂರ್ತಿ , ಹಾಲು ಜೇನು, ಕವಿರತ್ನ ಕಾಳಿದಾಸ ಮತ್ತು ಜೀವನ ಚೈತ್ರ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದರು.

ಪಾರ್ವತಮ್ಮ ಅವರು ತಮ್ಮ ಮೂರು ಗಂಡು ಮಕ್ಕಳ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಮ್ಮ ಹಿರಿಯ ಮಗ ಶಿವರಾಜಕುಮಾರ್‍ ಅವರ ಪ್ರಮುಖ ಚಿತ್ರಗಳಾದ ಆನಂದ್, ಓಂ, ಜನುಮದ ಜೋಡಿ, ಮತ್ತು ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಈ ವರೆಗೂ ಈ ಸಂಸ್ಥೆಯಿಂದ ಸುಮಾರು 80 ಚಿತ್ರಗಳು ಮೂಡಿಬಂದಿವೆ. ಕೇವಲ ಯಶಸ್ವಿ ಚಿತ್ರಗಳನ್ನಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಅನೇಕ ಖ್ಯಾತ ನಟಿಯರನ್ನು ಈ ಸಂಸ್ಥೆ ಪರಿಚಯಿಸಿದೆ. ಕನ್ನಡ ಚಿತ್ರರಂಗದ ಪ್ರಮುಖ ತಾರೆಯರಾದ ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ಅನು ಪ್ರಭಾಕರ್, ರಕ್ಷಿತಾ, ರಮ್ಯ ಅವರು ಕೂಡ ಇದೇ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೇ ಹಂಚಿಕೆದಾರರಾಗಿಯೂ ಪಾರ್ವತಮ್ಮ ಅವರು ಸೇವೆಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಭಾಜನರಾಗಿದ್ದರು.ಹೆಣ್ಣುಮಕ್ಕಳಿಗಾಗಿ ಮೈಸೂರಿನಲ್ಲಿ ಶಕ್ತಿಧಾಮ ಎಂಬ ಅಬಲಾಶ್ರಮ ಸ್ಥಾಪಿಸಿ ಸಾವಿರಾಕು ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದಾರೆ ಪಾರ್ವತಮ್ಮ ರಾಜಕುಮಾರ್.

ಪುನೀತ್​ ರಾಜ್​ಕುಮಾರ್​ ಅವರು ಕರುನಾಡಿನ ಪ್ರಕೃತಿ ಸೌಂದರ್ಯದ ಬಗ್ಗೆ ಒಂದು ವಿಶೇಷ ಡಾಕ್ಯುಮೆಂಟರಿ ಮಾಡಿದ್ದಾರೆ. ಅದರ ಬಗ್ಗೆ ಅವರು ಸಖತ್​ ಕಾಳಜಿ ಮತ್ತು ಭರವಸೆ ಇಟ್ಟುಕೊಂಡಿದ್ದರು. ನ.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅದರ ಟೈಟಲ್​ ಟೀಸರ್​ ಲಾಂಚ್​ ಮಾಡಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಅದಕ್ಕೂ ಮುನ್ನವೇ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಇಂದು (ಡಿ.6) ಆ ಸಾಕ್ಷ್ಯಚಿತ್ರದ ಶೀರ್ಷಿಕೆ ಟೀಸರ್​ ಅನಾವರಣಕ್ಕೆ ಸಮಯ ನಿಗದಿ ಆಗಿದೆ. ಪಾರ್ವತಮ್ಮ ರಾಜ್​ಕುಮಾರ್​ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಟೈಟಲ್​ ಟೀಸರ್​ ಬಿಡುಗಡೆ ಆಗಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ವೇಳೆ ಪುನೀತ್​ ರಾಜ್​ಕುಮಾರ್ ನಮ್ಮೊಂದಿಗೆ ಇಲ್ಲ ಎಂಬ ನೋವು ಈ ತಲೆಮಾರಿಗೆ ಕಡಿಮೆ ಆಗುವಂಥದ್ದಲ್ಲ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles