ಇಯರ್ ಅಂಡ್ ಜನರಲ್ಲೇ ಕೆಲವರಿಗೆ ತುಂಬಾ ಇಷ್ಟ ಯಾಕಂದ್ರೆ ಹೊಸ ವರ್ಷ ಬರ್ತಿದೆ ಅಂತ, ಆದ್ರೆ ತುಂಬಾ ಜನರಿಗೆ ಅಯ್ಯೋ ಒಂದು ವರ್ಷ ಕಳೆದೆ ಹೋಯ್ತಾ ಅಂತ ಬೇಜಾರು. ಅದ್ರಲ್ಲೂ ಈ ವರ್ಷ ಹಾಗೂ ಕಳೆದ 2020 ಎರಡೂ ವರ್ಷ, ಕೂಡ ಕೋವಿಡ್‌ನಿಂದಾಗಿ ತುಂಬಾ ಜನರ ಲೈಫು ಬರ್ಬಾದು ಮಾಡಿರೋದು ನಿಜ. ಇದೇ ವರ್ಷಾಂತ್ಯ ನಮ್ಮ ಸ್ಯಾಂಡಲ್‌ವುಡ್‌ಗೆ ಲಕ್ಕಿನೋ ಅನ್ ಲಕ್ಕಿನೋ.
ಚಿತ್ರರಂಗವನ್ನೇ ನೆಚ್ಚಿಕೊಂಡಿರೋ ಜನರಿಗೆ ವರ್ಷಾಂತ್ಯದ 2 ತಿಂಗಳು ಎಷ್ಟು ಲಕ್ಕಿಯೋ, ಅಷ್ಟೆ ಅನ್ ಲಕ್ಕಿ ಕೂಡ.ದೇವ್ರು ಖುಷಿಯನ್ನ ಕೊಟ್ರೆ ಅದ್ರ ಜೊತೆಗೆನೇ ಬೇಜಾರು ಕೊಡ್ತಾನೆ. ಸುಖದ ಬೆನ್ನಿಗೆ ದುಃಖಾನು ಕೊಡ್ತಾನೆ. ಹಾಗೇನೆ ಸ್ಯಾಂಡಲ್‌ವುಡ್‌ಗೂ ಅಷ್ಟೆ.
ಯಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಸ್ಟಾರ್‌ಗಳಿಗೆ ಲಕ್ಕಿ..!
ರಾಕಿಂಗ್ ಸ್ಟಾರ್ ಯಶ್, ಸಿಂಪಲ್ ಸ್ಟಾರ್ ರಕ್ಷಿತ್ ಸೇರಿದಂತೆ ಹಲವು ಸ್ಟಾರ್‌ಗಳಿಗೆ ಡಿಸೆಂಬರ್ ತಿಂಗಳು ಲಕ್ಕಿ. ಈ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ ಪಕ್ಕಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ ಅನ್ನೋದು ಈ ಸ್ಟಾರ್‌ಗಳ ನಂಬಿಕೆ. ಅದಕ್ಕೆ ಸರಿಯಾಗಿ ಈ ತಿಂಗಳಲ್ಲಿ ಸಿನಿಮಾಗಳು ರಿಲೀಸ್ ಆಗಿ ಸೂಪರ್ ಹಿಟ್ ಕೂಡ ಆಗಿವೆ. ಬರೀ ಸ್ಟಾರ್‌ಗಳಿಗೆ ಮಾತ್ರವಲ್ಲ, ನಿರ್ಮಾಪಕ ನಿರ್ದೇಶಕರುಗಳಿಗೂ ಸಿನಿಮಾ ರಿಲೀಶ್‌ಗೆ ಇದು ಲಕ್ಕಿ ಮಂತ್ ಅಂತಲೇ ಫೇಮಸ್ಸು.
ಸ್ಟಾರ್‌ಗಳನ್ನೇ ನುಂಗಿಬಿಡುವ ತಿಂಗಳುಗಳು..!
ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಸೇರಿದಂತೆ ಅನೇಕ ಕನ್ನಡದ ದಿಗ್ಗಜ ನಟರ ಸಾವು ಸಂಭವಿಸಿರೋದು ಇದೇ ತಿಂಗಳುಗಳಲ್ಲಿ, ಈ ವರ್ಷವೂ ಪುನೀತ್ ರಾಜ್‌ಕುಮಾರ್ ಹಾಗೂ ಇತ್ತೀಚೆಗೆ ಶಿವರಾಂ ಅವ್ರನ್ನ ಕಳೆದುಕೊಂಡಿತ್ತು ಚಿತ್ರರಂಗ. ನವೆಂಬರ್-ಡಿಸೆಂಬರ್ ಬಂತಂದ್ರೆ ಸಾಕು, ಮತ್ಯಾರು ನಮ್ಮನ್ನ ಬಿಟ್ಟು ಹೋಗ್ತಾರೋ ಅನ್ನೋ ಆತಂಕ ಚಂದನವನದ ಕಲಾವಿದರು ಹಾಗೂ ತಂತ್ರಜ್ಞರನ್ನ ಕಾಡೋಕೆ ಶುರು ಮಾಡುತ್ತೆ. ಈಗ ನೀವೇ ಹೇಳಿ, ಸ್ಯಾಂಡಲ್‌ವುಡ್‌ಗೆ ಈ ನವೆಂಬರ್ ಹಾಗೂ ಡಿಸೆಂಬರ್ ಲಕ್ಕಿನೋ, ಅನ್ ಲಕ್ಕಿನೋ..?
****