ಟೀಸರ್ ಮೂಲಕ ಕೂತುಹಲ ಕೆರಳಿಸಿದ್ದ, ಅದಿತಿ ಪ್ರಭುದೇವ ಅಭಿನಯದ ಮೊದಲ ಕನ್ನಡದ ಸೂಪರ್ ವುಮನ್ ಕಥೆಯ ಸಿನಿಮಾ ʻಆನʼ. ʻಆನʼದ ಥಿಯೇಟ್ರಿಕಲ್ ಟ್ರೇಲರ್ ರಿಲೀಸ್ ಆಗಿದೆ. ಇದೇ ಡಿಸೆಂಬರ್ 17ಕ್ಕೆ ತೆರೆಗೆ ಬರ್ತಾ ಇರೋ ʻಆನʼ ಸಿನಿಮಾದ ಥಿಯೇಟ್ರಿಕಲ್ ಟ್ರೇಲರ್, ಪ್ರೇಕ್ಷಕರನ್ನ ಥಿಯೇಟರ್ಗೆ ಕರ್ಕೊಂಡು ಬರೋದ್ರಲ್ಲಿ ಅನುಮಾನವೇ ಇಲ್ಲ. ಸಿನಿಮಾದ ಟ್ರೇಲರ್ ನೋಡಿದ್ರೇ ಇದೇನು ಹಾರರ್ ಸಿನಿಮಾನೋ, ಸೈನ್ಸ್ ಫಿಕ್ಷನ್ ಸಿನಿಮಾನೋ ಅನ್ನೋ ಕುತೂಹಲ ಮೂಡಿಸುತ್ತೆ.

ರೊಮ್ಯಾಂಟಿಕ್ ಸಿನಿಮಾಗಳ ಜೊತೆ ಜೊತೆಗೆ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಫೇವರಿಟ್ ಹೀರೋಯಿನ್ ಆಗಿರೋ ಅದಿತಿ ಪ್ರಭುದೇವಾ, ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿರೋ ಸಿನಿಮಾ ಈ ʻಆನʼ. ʻಆನʼ ಅಂದ್ರೆ ಈ ಸಿನಿಮಾದಲ್ಲಿ ಬರುವ ಅನರ್ಘ್ಯ ಅನ್ನೋ ಹುಡುಗಿಯ ಹೆಸರು. ಇವಳೇನು ಸೂಪರ್ ವುಮನ್ನೋ, ಅನ್ಯಗ್ರಹ ಜೀವಿಯೋ ಅಥವ ಮಾನವ ನಿರ್ಮಿತ ರೋಬೋನಾ ಅನ್ನೋ ಕುತೂಹಲ ಮೂಡಿಸುತ್ತಿದೆ.
ಮನೋಜ್ ನಡುಲಮನೆ ನಿರ್ದೇಶನದ ಸಿನಿಮಾಕ್ಕೆ, ಶ್ರೀಮತಿ ಪೂಜಾ ವಸಂತ್ ಹಣ ಹೂಡಿದ್ದಾರೆ. ʻಆನʼಕ್ಕೆ ರುತ್ವಿಕ್ ಮುರಳೀಧರ ಮ್ಯೂಸಿಕ್ ಹಾಗೂ ಉದಯ್ ಲೀಲಾ ಕ್ಯಾಮರಾ ವರ್ಕ್ ಇದೆ. ಸಿನಿಮಾದಲ್ಲಿ ಅದಿತಿ ಪ್ರಭುದೇವಾ ಜೊತೆಗೆ ಚೇತನ್ ಗಂಧರ್ವ, ಸುನಿಲ್ ಪುರಾಣಿಕ್, ಸಮರ್ಥ ನರಸಿಂಹರಾಜು, ರಣ್ವಿತ್ ಶಿವಕುಮಾರ್, ಪ್ರೇರಣಾ ಕಂಬಂ ಸೇರಿದಂತೆ ಅನೇಕ ಹೊಸ ಕಲವಿದರ ದಂಡೇ ಇದೆ. ಸಿನಿಮಾ ತೆರೆಗೆ ಬರೋಕೆ ರಡಿಯಾಗಿದ್ದು, ಹೊಸ ಅನುಭವವನ್ನ ಥಿಯೇಟರ್ನಲ್ಲಿ ಪಡೆಯಲು ರೆಡಿಯಾಗಿ..
****