ಫಸ್ಟ್ ಬೆಂಗಳೂರಲ್ಲಿ 2 ಕೇಸ್ ಕಾಣಿಸಿಕೊಂಡ ಓಮೈಕ್ರಾನ್ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ 20-30 ಹೀಗೆ ಜಾಸ್ತಿ ಆಗ್ತಾನೇ ಇದೆ. ಇತ್ತೀಚೆಗಷ್ಟೆ ಕೊವಿಡ್ 2ನೇ ಅಲೆ ತಣ್ಣಗಾಗಿ ಒಂದೊಂದೆ ಸಿನಿಮಾ ಮಂದಿರಗಳು ಓಪನ್ ಆಗಿ, ವಾರಕ್ಕೊಂದಷ್ಟು ಒಳ್ಳೋಳ್ಳೆ ಸಿನಿಮಾಗಳು ರಿಲೀಸ್ ಆಗ್ತಾ ಇದ್ವು, ಜನಾನು ನಿಧಾನವಾಗಿ ಥಿಯೇಟರ್ಗೆ ಬರೋಕೆ ಶುರು ಮಾಡಿದ್ರು.
ಈ ವಾರ ರಿಲೀಸ್ ಆದ `ಮದಗಜ’ ಸಿನಿಮಾ ಕೂಡ 20 ಕೋಟಿ ಕಲೆಕ್ಷನ್ ಮಾಡಿ ಗೆದ್ದಿತ್ತು. ಆದ್ರೆ ಈಗ ಓಮೈಕ್ರಾನ್ ಭೀತಿ ಎಲ್ಲಡೆ ಹರಡ್ತಾ ಇರೋ ಕಾರಣ, ಮುಂದಿನ ವಾರ ಅಂದ್ರೆ ಡಿಸೆಂಬರ್ 10ಕ್ಕೆ ತೆರೆಗೆ ಬರಬೇಕಿದ್ದ ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಅಭಿನಯದ `ಅವತಾರ ಪುರುಷ’ ರಿಲೀಸ್ ಮುಂದಕ್ಕೆ ಹೋಗಿದೆ.

ಕಳೆದ ವಾರವಷ್ಟೆ ರಿಲೀಸ್ ಆಗಿದ್ದ ಸಿಂಪಲ್ ಸುನಿ ನಿರ್ದೇಶನದ ಗಣೇಶ್ ಮೂವಿ `ಸಖತ್’ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು, ಈಗ ಇದೇ ಸುನೀ ಮತ್ತೊಂದು ಸಕ್ಸಸ್ಗಾಗಿ ಕಾದು ಕೂತಿದ್ರು, ಆದ್ರೆ ಓಮೈಕ್ರಾನ್ ಕೇಸ್ಗಳ ಹೆಚ್ಚಳದಿಂಧಾಗಿ ಥಿಯೇಟರ್ಗೆ ಜನ ಬರುವ ಸಂಖ್ಯೆ ಕಡಿಮೆಯಾಗಬಹುದು ಅಂತ ಯೋಚಿಸಿ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಲಾಗಿದೆ.

ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ ಸಿನಿಮಾದ ಹಾಡುಗಳು, ಟೀಸರ್ ಈಗಾಗ್ಲೆ ಪಾಪ್ಯುಲರ್ ಆಗಿದ್ವು, ಮುಂದಿನ ವಾರ ರಿಲೀಸ್ಗೂ ರೆಡಿಯಾಗಿತ್ತು. ಆದ್ರೀಗ ರಿಲೀಸ್ ಮುಂದಕ್ಕೆ ಹೋಗಿದೆ. ಮುಂದಿನ ರಿಲೀಸ್ ಡೇಟ್ ಯಾವಾಗ ಅಂತ ಶೀಘ್ರದಲ್ಲಿ ಚಿತ್ರತಂಡ ತಿಳಸಲಿದೆ.

****