ಗಾಂಧಿ ನಗರದಲ್ಲಿ ಕಳೆದ ಆರೇಳು ತಿಂಗಳಿನಿಂದ ಭಾರಿ ಸುದ್ದಿಯಲ್ಲಿದ್ದ ‘ಲವ್ ಯೂ ರಚ್ಚು’ ಚಿತ್ರ ಡಿಸೆಂಬರ್ 31ಕ್ಕೆ ತೆರೆ ಕಾಣುತ್ತಿದೆ. ಟ್ರೈಲರ್ ಮತ್ತು ಸಾಂಗ್ಸ್ ಗಳಿಂದ ಈಗಾಗಲೆ ಸಕತ್ ಸೌಂಡ್ ಮಾಡುತ್ತಿದೆ ಲವ್ ಯೂ ರಚ್ಚು ಸಿನಿಮಾ.
ಬೆಳ್ಳಿ ಪರದೆಯ ಮೇಲೆ ವರ್ಷಾಂತ್ಯಕ್ಕೆ ಬಹು ನಿರೀಕ್ಷೆಯ ಚಿತ್ರವಾದ “ಲವ್ ಯು ರಚ್ಚು” ರಾರಾಜಿಸಲಿದೆ. ಜಿ.ಸಿನಿಮಾಸ್ ಗುರು ದೇಶಪಾಂಡೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ನಾಯಕ ಮತ್ತು ನಾಯಕಿಯಾಗಿ ಅಜಯ್ ರಾವ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಶೂಟಿಂಗ್ ವೇಳೆ ವಿದ್ಯುತ್ ಅವಘಡದಿಂದ ಫೈಟರ್ ವಿವೇಕ್ ಎಂಬುವವರು ಸಾವನ್ನಪ್ಪಿದ್ದರು, ಆಗ ಚಿತ್ರಕ್ಕೆ ಸಾಕಷ್ಟು ಅಡಚಣೆಯೂ ಆಗಿತ್ತು. ನಂತರ ನಾಯಕಿ ರಚಿತಾ ರಾಮ್ ಅವರ ಫಸ್ಟ್ ನೈಟ್ ಹೇಳಿಕೆಯಿಂದ ಸಾಕಷ್ಟು ಕಾಂಟ್ರವರ್ಸಿ ಕೂಡ ಕ್ರಿಯೇಟ್ ಆಗಿ ರಚ್ಚು ಹೆಚ್ಚು ಟ್ರೋಲ್ ಆಗಿದ್ದರು, ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಚಿತ್ರತಂಡ ಸಿನಿಮಾವನ್ನ ಭರ್ಜರಿಯಾಗಿ ಪ್ರಮೋಶನ್ ಮಾಡಿತ್ತು. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ ರಿಲೀಸ್ ಆಗುತ್ತಿದೆ, ಪ್ರೇಕ್ಷಕ ಪ್ರಭು ‘ಲವ್ ಯೂ ರಚ್ಚು’ ವನ್ನು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.
ಚಿತ್ರದಲ್ಲಿ ಬಿ ಸುರೇಶ್, ಅಚ್ಯತ್ ಕುಮಾರ್, ರಾಘು ಶಿವಮೊಗ್ಗ, ಅರವಿಂದ್ ರಾವ್ , ನಂದಗೋಪಾಲ, ಮುಂತಾದವರ ತಾರಾಬಳಗವೇ ಇದೆ. ಶಂಶಾಕ್ ಅವರ ಕಥೆಗೆ ಶಂಕರ್ ಎಸ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ.
ಮಣಿಕಾಂತ ಕದ್ರಿಯವರ ಸಂಗೀತ, ಶ್ರೀ ಕ್ರೇಜಿಮೈಂಡ್ಸ್ ಅವರ ಛಾಯಾಗ್ರಹಣ ಮತ್ತು ಸಂಕಲನ , ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ , ವಿನೋದ್, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲ ಕಡೆ ಬಹಳಷ್ಟು ಸದ್ದು ಮಾಡುತ್ತಿರುವ “ಲವ್ ಯ ರಚ್ಚು” ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
****