22.9 C
Bengaluru
Friday, March 24, 2023
spot_img

ಯವರಾಜ ನಿಖಿಲ್ ಅಭಿನಯದ ರೈಡರ್ ಚಿತ್ರ ಡಿ.24ಕ್ಕೆ ಥಿಯೇಟರ್ ಗೆ ಎಂಟ್ರಿ

ಚಂದನವನದ  ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ನಾಲ್ಕನೇ ಸಿನಿಮಾ “ರೈಡರ್” ಚಿತ್ರ ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಈಗ ಭಾರಿ ಸದ್ದು ಮಾಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸದ್ಯ ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿರುವ ರೈಡರ್ ಚಿತ್ರತಂಡ ಪ್ರಚಾರದ ಕಾರ್ಯವನ್ನು ಅದ್ದೂರಿಯಾಗಿ ನಡೆಸುತ್ತಿದೆ.

“ರೈಡರ್” ಚಿತ್ರವನ್ನುಆದ್ದೂರಿಯಾಗಿ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದು , ಯುವರಾಜ ನಿಖಿಲ್ ಕುಮಾರಸ್ವಾಮಿ ಗೆ ಜೋಡಿಯಾಗಿ ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ. ನಾಯಕಿಯಾರಾಗಿ ಯುವ ನಟಿ ಕಾಶ್ಮೀರಿ ಪರ್ದೇಸಿ ನಟಿಸಿದ್ದರೆ, ಮತ್ತೊಬ್ಬ ನಾಯಕಿಯಾಗಿ ಅನುಷಾ ರೈ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದ ತಾರಾಬಳಗದಲ್ಲಿ ದತ್ತಣ್ಣ, ಶೋಭರಾಜ್, ಚಿಕ್ಕಣ್ಣ, ಶಿವರಾಜ್.ಕೆ.ಆರ್.ಪೇಟೆ, ರಾಜೇಶ್ ನಟರಂಗ, ಬಿಗ್​ ಬಾಸ್​ ವಿನ್ನರ್​ ಮಂಜು ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸಿದ್ದಾರೆ.

ರೈಡರ್ ಸಿನಿಮಾ ಪಕ್ಕಾ ಆಕ್ಷನ್​ ರೊಮೆಯಾಂಟಿಕ್ ಮತ್ತು ಲವ್ ಸ್ಟೋರಿ ಕಥಾಹಂದರವನ್ನು ಒಳಗೊಂಡಿದ್ದು , ಕ್ರೀಡಾ ಹಿನ್ನೆಲೆ ಹೊಂದಿದಂತಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು , ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಡಾ.ರವಿವರ್ಮ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.

ಲಹರಿ ಫಿಲ್ಮ್ಸ್ ಮೂಲಕ ಈ ಚಿತ್ರವನ್ನ ಬಹಳ ಅದ್ದೂರಿಯಾಗಿ  ತೆರೆಗೆ ತರಲು ಚಂದ್ರು ಮನೋಹರನ್ ಹಾಗೂ ಸುನೀಲ್ ಗೌಡ ಸಾರಥ್ಯ ವಹಿಸಿದ್ದಾರೆ. ಈ ಚಿತ್ರ ಶಿವನಂದಿ ಎಂಟರ್ ಟೈನ್ಮೆಂಟ್ಸ್ ಮೂಲಕ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಖುಷಿ ಇಮ್ಮಡಿಗೊಂಡಿದೆ. ಇನ್ನೇನಿದ್ರೂ “ರೈಡರ್” ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles