1970 ರಲ್ಲಿ ಶಂಕರ್ನಾಗ್ ಅಭಿನಯದ ’ಒಂದಾನೊಂದು ಕಾಲದಲ್ಲಿ’ ಚಿತ್ರವೊಂದು ತೆರೆಕಂಡು ಯಶಸ್ಸು ಗಳಿಸಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಕೊನೆಯ ಹಂತದಲ್ಲಿ ಬಂದು ನಿಂತಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ಭಾನುವಾರದಂದು ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಸಮಾಧಿ ಬಳಿ ಚಿತ್ರದ ಟ್ರೈಲರ್ನ್ನು ಪುನೀತ್ ರಾಜಕುಮಾರ್ ಅಂಗರಕ್ಷಕರಾಗಿದ್ದ ಚಲಪತಿ ಮತ್ತು ಸಿರಿ ಮ್ಯೂಸಿಕ್ ಸಂಸ್ಥೆಯ ಚಿಕ್ಕಣ್ಣ ಬಿಡುಗಡೆ ಮಾಡಿದರು.
ಹಿರಿಯ ನಿರ್ದೇಶಕ ಭಗವಾನ್ ಬಳಿ ತರಭೇತಿ ಪಡದುಕೊಂಡಿರುವ ಎನ್.ಮಂಜುನಾಥ್ ಸಿನಿಮಾಕ್ಕೆ ಕಥೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಆನೇಕಲ್ ಮೂಲದ ಟಿ.ಎಸ್.ಗೋಪಲ್ ಅವರು ಮುನಿ ಲಕ್ಷೀವೆಂಕಟೇಶ್ವರ ಕ್ರಿಯೆಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುನೇಶ್, ಪ್ರಜ್ವಲ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

1980ರ ರೆಟ್ರೋದಲ್ಲಿ ನಡೆಯುವ ಕರವಸ್ತ್ರ (ಕರ್ಚಿಫ್)ದ ಮೇಲಿನ ಪ್ರೀತಿ ಕತೆ ಇರಲಿದೆ. ನಾಯಕ ಮತ್ತು ನಾಯಕಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಕರವಸ್ತ್ರವು ಇಬ್ಬರ ನಡುವೆ ಆಟವಾಡಿಸುತ್ತಿರುತ್ತದೆ. ಅದು ಇಬ್ಬರನ್ನು ಹೇಗೆ ಸೇರಿಸುತ್ತದೆ. ಪ್ರೀತಿಯ ಸಂದೇಶ ಯಾವ ರೀತಿ ರವಾನೆಯಾಗುತ್ತಿರುತ್ತದೆ ಎಂಬಂತ ವಿಷಯಗಳನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಹರ್ಷಲಹನಿ ನಾಯಕಿ.ಇನ್ನುಳಿದಂತೆ ಶೋಭರಾಜ್, ಸಂಗೀತ, ನೀನಾಸಂಸತೀಶ್, ಜಿ.ತರುಣ್ಕುಮಾರ್ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ಹೊನ್ನಾವರ ಸಾಹಿತ್ಯದ ನಾಲ್ಕು ಗೀತೆಗಳಿಗೆ ಯಶವಂತ್ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಏಳುಕೋಟೆಚಂದ್ರು, ಸಂಕಲನ ಸೆಲ್ವರಾಜು-ವಿನೋಧ್, ಸಾಹಸ ಅಲ್ಟಿಮೇಟ್ಶಿವು, ನೃತ್ಯ ಲಕ್ಷೀತ ಅವರದು. ಕನಕಪುರ, ಹಾರೋಹಳ್ಳಿ,ಆನೇಕಲ್, ತಟ್ಟಗೆರೆ, ಹೂಕ್ಲೇರಿ ಕಡೆಗಳಲ್ಲಿ ಚಿತ್ರೀಕರಣ ನಡೆದು ಕೊನೆಯ ಎರಡು ದಿನದ ಕ್ಲೈಮಾಕ್ಸ್ನ್ನು ಸಕಲೇಶಪುರದಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.
****