ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾ ಇದೇ ಶುಕ್ರವಾರ ತೆರೆಕಂಡು ಭರ್ಜರಿ ಓಪನಿಂಗ್ ಕಂಡಿದೆ. ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನದ ಮಾಸ್ ಎಂಟರ್ಟೈನರ್ ಸಿನಿಮಾ ರಾಜ್ಯದ ಎಲ್ಲಾ ಸಿನಿ ಪ್ರೇಮಿಗಳಿಗೆ ಮತ್ತೊಂದು ಲಾಕ್ಡೌನ್ ನಂತ್ರ ಸಖತ್ ಮನರಂಜನೆ ನೀಡಿ ಸೈ ಎನಿಸಿಕೊಂಡಿದೆ. ರೋರಿಂಗ್ ಸ್ಟಾರ್ನ ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬರೋಬ್ಬರಿ 850 ಸ್ಕ್ರೀನ್ಗಳಲ್ಲಿ ತೆರೆಕಂಡ ಸಿನಿಮಾ ಮೊದಲ ದಿನವೇ 7.8 ಕೋಟಿ ಕಲೆಕ್ಷನ್ ಮಾಡಿತ್ತು. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಮಂಡ್ಯ ಮೈಸೂರು ಭಾಗದಲ್ಲಿ ಹೌಸ್ಫುಲ್ ಪ್ರದರ್ಶನದ ಜೊತೆಗೆ ಮುನ್ನುಗ್ತಾ ಇರೋ ಸಿನಿಮಾದ 2ನೇ ದಿನದ ಕಲೆಕ್ಷನ್ 5.64 ಕೋಟಿ ಮುಟ್ಟಿದೆ. ಇವತ್ತು ಕೂಡ ಸಿನಿಮಾಕ್ಕೆ ಸಖತ್ ರೆಸ್ಪಾನ್ಸ್ ಸಿಗ್ತಾ ಇದ್ದು ಮೂರನೇ ದಿನದ ಅಂತ್ಯಕ್ಕೆ 20 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಅಬ್ಬರದ ಸಿನಿಮಾಕ್ಕೆ ಜನರ ಶಹಬಾಶ್ ಅಂತಿದ್ದಾರೆ. ಜನರಿಂದಲೇ ಸಿಕ್ತಾ ಇರೋ ಸಖತ್ ರೆಸ್ಪಾನ್ಸ್ ನಿಂದಾಗಿ, ಥಿಯೇಟರ್ಗೆ ಸಿನಿಮಾ ನೋಡಲು ಬರುತ್ತಿರವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಕಳೆದ ಲಾಕ್ ಡೌನ್ ನಂತ್ರ ರಾಬರ್ಟ್ ಸಿನಿಮಾ ರಿಲೀಸ್ ಮಾಡಿ ಗೆದ್ದಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಈಗ 2ನೇ ಲಾಕ್ಡೌನ್ ನಂತ್ರ ಮದಗಜ ಗೆಲುವಿನ ಖುಷಿಯಲ್ಲಿದ್ದಾರೆ.
****