ಆ್ಯಕ್ಷನ್ ಕಥಾಹಂದರ ಹೊಂದಿರುವ ‘ಅರ್ಜುನ್ ಗೌಡ’ ಚಿತ್ರವು ಡಿಸೆಂಬರ್ 31ಕ್ಕೆ ತೆರೆ ಕಾಣ್ತಿದೆ. ಇತ್ತೀಚೆಗೆ ಪ್ರಜ್ವಲ್ ದೇವರಾಜ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಅರ್ಜುನ್ ಗೌಡ ಸಿನಿಮಾದ ಟ್ರೇಲರ್ ರಿವೀಲ್ ಆಗಿದ್ದು, ಬೇರೆ ಭಾಷೆಯ ವಿತರಕರು ಹಾಗೂ ನಿರ್ಮಾಪಕರು ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಆಗದೆ ಹೋಗಿದ್ದರೆ ಈ ಚಿತ್ರ ಏಪ್ರಿಲ್ನಲ್ಲಿ ಬಿಡುಗಡೆಯಾಗಬೇಕಿತ್ತು. ಅಲ್ಲದೇ ಚಿತ್ರದ ನಿರ್ಮಾಪಕರಾದ ರಾಮು ಅವರು ಕೊರೊನಾಗೆ ಬಲಿಯಾಗಿದ್ದರಿಂದ ಸಿನಿಮಾದ ಬಿಡುಗಡೆಗೆ ತಡವಾಯಿತು.
ಕೋಟಿ ನಿರ್ಮಾಪಕ ರಾಮು ನಿರ್ಮಾಣದ ‘ಅರ್ಜುನ್ ಗೌಡ’ ಚಿತ್ರವನ್ನು ರಿಲೀಸ್ ಮಾಡಲು ರಾಮು ಪತ್ನಿ ಮಾಲಾಶ್ರೀ ಸಿದ್ದತೆ ನಡೆಸಿದ್ದಾರೆ. ಪತಿಯ ಕೊನೆ ಕನಸಿಗೆ ಬೆನ್ನೆಲುಬಾಗಿದ್ದಾರೆ, ರಾಮು ಕಡೆ ಚಿತ್ರ ಅರ್ಜುನ್ ಗೌಡ ಚಿತ್ರವನ್ನು ರಿಲೀಸ್ ಮಾಡಲು ಸಜ್ಜಾಗಿದ್ದಾರೆ ಮಾಲಾ ಶ್ರೀ ಕೋಟಿ ನಿರ್ಮಾಪಕ ರಾಮು ನಿರ್ಮಾಣದ ಕೊನೆ ಚಿತ್ರ ಅರ್ಜುನ್ ಗೌಡ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಇದೇ ತಿಂಗಳ 31ಕ್ಕೆ ಅರ್ಜುನ್ ಗೌಡ ಬಿಡುಗಡೆ ಆಗಲಿದೆ. ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರವನ್ನ ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಈಗಾಗ್ಲೇ ಟ್ರೈಲರ್ ನಿಂದ ಗಮನ ಸೆಳೆದಿರೋ ಅರ್ಜುನ್ ಗೌಡ, ನೈಜ ಘಟನೆಯನ್ನಾಧರಿಸಿದ ಚಿತ್ರವೆಂಬ ಸೂಚನೆ ಕೊಡ್ತಿದೆ.
ಗೋಲಿಬಾರ್ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕೋಟಿ ನಿರ್ಮಾಪಕ ರಾಮು ಅವರನ್ನು ಕಳೆದ ಏಪ್ರೀಲ್ 26 ರಂದು ಕೊರೋನಾ ಬಲಿ ಪಡೆದುಕೊಂಡಿತ್ತು. ಎಷ್ಟೆಲ್ಲಾ ಪ್ರಯತ್ನಿಸಿದರೂ ಅವರನ್ನು ಉಳಿಸಿಕೊಳಲು ಆಗಲಿಲ್ಲಾ, ಕನ್ನಡ ಚಿತ್ರರಂಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿದ್ದ ರಾಮು, ಗೋಲಿಬಾರ್, ಎಕೆ 47, ಸಿಂಹದ ಮರಿ ಲಾಕಪ್ ಡೆತ್ ನಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದರು. ಅವರಿಲ್ಲದ ಈ ಸಂದರ್ಭದಲ್ಲಿ ಅವರ ಕಡೆಯ ನಿರ್ಮಾಣದ ಚಿತ್ರ ಅರ್ಜುನ್ ಗೌಡ ತೆರೆಗೆ ಬರ್ತಿದೆ.

ರಾಮು ನಿರ್ಮಾಣದ ಸಿನಿಮಾ ಎಂದ ಮೇಲೆ ದೊಡ್ಡ ತಾರಾ ಬಳಗ ಇರಲೇಬೇಕು, ಅರ್ಜುನ್ ಗೌಡ ಚಿತ್ರದಲ್ಲೂ ರಾಹುಲ್ ದೇವ್, ಸ್ಪರ್ಶ ರೇಖಾ, ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇ ಗೌಡ, ಮೋಹನ್ ಜುನೇಜ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಕೊನೆಯದಾಗಿ ‘ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.
****