ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ, ಜೇಮ್ಸ್ ಇಂದಿನಿಂದ ಮತ್ತೆ ಶೂಟಿಂಗ್ ಆರಂಭಿಸಿದೆ. ಕನ್ನಡದ ಜನಪ್ರಿಯಾ ಮಾಸ್ ಸಿನಿಮಾಗಳ ನಿರ್ದೇಶಕ ಭರ್ಜರಿ ಚೇತನ್ ನಿರ್ದೇಶನದ, ಜೇಮ್ಸ್ ಸಿನಿಮಾದ ಟಾಕಿ ಪೊರ್ಷನ್ ಚಿತ್ರೀಕರಣ ಇವತ್ತಿನಿಂದ ಮತ್ತೆ ಶುರುವಾಗಿದೆ. ಪುನೀತ್ ರಾಜ್‌ಕುಮಾರ್ ಇಲ್ಲದ ಶೂಟಿಂಗ್ ಸೆಟ್‌ನಲ್ಲಿ ಭಾರವಾದ ಮನಸ್ಸಿನಿಂದಲೇ ಚಿತ್ರೀಕರಣ ನಡೆಸುತ್ತಿದೆ ಚಿತ್ರತಂಡ.

ಪುನೀತ್ ರಾಜ್‌ಕುಮಾರ್ ನಿಧನದಿಂದ ಸಿನಿಮಾದ ಕಥೆಯಲ್ಲಿ ಏನಾದ್ರು ಬದಲಾವಣೆಗಳಾಗಿದ್ಯಾ? ಅಥವ ಮೊದಲಿದ್ದ ಕಥೆಯ ಜೊತೆಗೆ ಸಿನಿಮಾ ರಿಲೀಸ್ ಆಗಲಿದ್ಯಾ? ಅನ್ನೋ ಮಾಹಿತಿಯನ್ನ ಸಿನಿಮಾ ಟೀಮ್ ಇನ್ನೂ ಎಲ್ಲಿಯೂ ರಿವೀಲ್ ಮಾಡಿಲ್ಲ. ಸಧ್ಯಕ್ಕೆ ಪುನೀತ್ ಅವ್ರ ಬರ್ತ್‌ಡೇ ಅಂದ್ರೆ ಮಾರ್ಚ್ 17ಕ್ಕೆ ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ರಯತ್ನ ನಡೆಸುತ್ತಿದೆ.

ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡ್ತಿರೋ ಸಿನಿಮಾದಲ್ಲಿ, ಪುನೀತ್‌ಗೆ ನಾಯಕಿಯಾಗಿ ರಾಜಕುಮಾರ ಹೀರೋಯಿನ್ ಪ್ರಿಯಾ ಆನಂದ್ ನಟಿಸಿದ್ದು, ಚಿತ್ರದಲ್ಲಿ ಟಾಲಿವುಡ್ ನಟ ಶ್ರೀಕಾಂತ್, ಶರತ್ ಕುಮಾರ್, ಅನುಪ್ರಭಾಕರ್, ಚಿಕ್ಕಣ್ಣ, ಸಾಧುಕೋಕಿಲಾ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಅಪ್ಪು ಅವ್ರ ನಟನೆಯ ಕೊನೆ ಸಿನಿಮಾವಾದ ಕಾರಣ, ಬಹು ದೊಡ್ಡ ನಿರೀಕ್ಷೆ ಇದೆ.