ಇತ್ತೀಚೆಗಷ್ಟೆ ಮುಹೂರ್ತ ಮಾಡಿಕೊಂಡ ಯೋಗರಾಜ್ ಭಟ್ಟರ್ ಹೊಸ ಸಿನಿಮಾ ʻಗರಡಿʼಗೆ ನಾಯಕಿ ಆಯ್ಕೆ ಆಗಿದೆ. ವಿಭಿನ್ನ ಟೈಟಲ್ ಹಾಗು ಕಥೆಯ ಗರಡಿ ಸಿನಿಮಾದಲ್ಲಿ ನಾಯಕ ಯಶಸ್ ಸೂರ್ಯಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಭಟ್ಟರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಡಿಂಪಲ್ ಕ್ವೀನ್ ರಚ್ಚು.

ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಿನಿಮಾ ಆಗಿರೋ ಗರಡಿ, ಭಟ್ಟರ ಡೈರೆಕ್ಷನ್ನಲ್ಲಿ ಹೇಗಿರಲಿದೆ ಅನ್ನೋ ಕುತೂಹಲವಿದೆ. ರೊಮ್ಯಾಂಟಿಕ್-ಕಾಮಿಡಿ ಸಿನಿಮಾಗಳಿಗೆ ಸ್ಯಾಂಡಲ್ವುಡ್ನಲ್ಲಿ ಹೆಸರುವಾಸಿಯಾಗಿರೋ ಭಟ್ಟರು ಆಫ್ಟರ್ ಎ ಲಾಂಗ್ ಟೈಮ್ ಒಂದು ಪಕ್ಕಾ ಮಾಸ್ ಆಕ್ಷನ್ ಎಂಟರ್ಟೈನರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ.

ಬಿಸಿ ಪಾಟೀಲ್ ನಿರ್ಮಾಣ ಮಾಡ್ತಿರೋ ಗರಡಿ ಸಿನಿಮಾ ಬಹುತೇಕ ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣವಾಗಲಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಳ್ತಾ ಇರೋ ರಚಿತಾ ರಾಮ್, ಭಟ್ಟರ ಶೈಇಯ ಡೈಲಾಗ್ ಗಳಿಂದ ಈ ಸಿನಿಮಾದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಅಂತ ಕಾದು ನೋಡ್ಬೇಕು.
****