22.9 C
Bengaluru
Sunday, March 26, 2023
spot_img

ಹಿರಿಯ ನಟನ ದರ್ಶನ ಪಡೆದ ಅನಿಲ್ ಕುಂಬ್ಳೆ

ಹಿರಿಯ ನಟ ಶಿವರಾಮ್ ಅವರ ನಿಧನಕ್ಕೆ ನಾಡಿನ ಗಣ್ಯರು, ಚಿತ್ರರಂಗದ ದಿಗ್ಗಜರು, ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಭಾರತದ ಖ್ಯಾತ ಕ್ರಿಕೇಟ್ ಆಟಗಾರ ಅನೀಲ್ ಕುಂಬ್ಳೆ ಹಿರಿಯ ನಟ ಶಿವರಾಮ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿವರಾಮ್ ಕಟುಂಬಕ್ಕೂ ಅನೀಲ್ ಕುಂಬ್ಳ್ಳೆ ಕುಟುಂಬಕ್ಕು ಉತ್ತಮ ಬಾಂದವ್ಯ ಇತ್ತು ಹಾಗಾಗಿ ಶಿವರಾಂ ಅವರ ಬಗ್ಗೆ ಹೆಚ್ಚು ಆಪ್ತತೆ ಮತ್ತು ಪ್ರೀತಿಯನ್ನು ಹೊಂದಿದ್ದರು ಅನೀಲ್ ಕುಂಬ್ಳೆ. ನಟ ಶಿವರಾಮ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

Deeply saddened by the passing of Shivaram Anna. He was an icon, an institution and leaves behind a rich legacy. Huge loss to the Kannada film industry. Heartfelt condolences to his family, friends and well wishers.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಂಬ್ಳೆ, ಶಿವರಾಮಣ್ಣನ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಯುಂಬಲಾರದ ನಷ್ಟ ಎಂದಿದ್ದಾರೆ. ನನಗೆ ಶಿವರಾಮ್ ಸರ್ ತುಂಬಾನೇ ಬೇಕಾದವರು, ಮನೆ ಬಂದಾಗ ಕೆಲ ವಿಚಾರದ ಬಗ್ಗೆ ಮಾತಾಡೋರು, ಮನೆಯಲ್ಲಿ ಪೂಜೆ ಆಗಲಿ ಯಾವುದೇ ಕಾರ್ಯಕ್ರಮ ಇದ್ರು ಕರೀತಾ ಇದ್ರು, ಎಂದು ಶಿವರಾಮ್ ಅವರ ಕುಟುಂಬದ ಒಡನಾಟದ ಬಗ್ಗೆ ನೆನೆದು ಭಾವುಕರಾದ್ರು.

ತುಂಬಾ ನೋವಿನ ವಿಚಾರ.. ಅರಗಿಸಿಕೊಳ್ಳೋಕೆ ಆಗ್ತಿಲ್ಲ, ಮನೆಗೆ ಕರೀತಾನೇ ಇದ್ರು.. ಮನೆಗೆ ಬಂದು ಲೈಬ್ರೇರಿ ನೋಡು ಅಂದಿದ್ರು, ಕೆಲವೊಂದು ಫೋಟೋಗ್ರಾಫಿ ಮಾಡಿದ್ದೀನಿ ನೋಡಿ ಅಂದಿದ್ರು, ಅವರ ಕೋರಿಕೆ ನೇರವೇರಿಸೋಕೆ ಆಗಿಲ್ಲ ನನಗೆ, ಚಿತ್ರರಂಗಕ್ಕೆ ಇದು ದೊಡ್ಡ ಲಾಸ್ ಎಂದು ಬೇಸರ ವ್ಯಕ್ತಪಡಿಸಿದ್ರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles