23.8 C
Bengaluru
Thursday, December 8, 2022
spot_img

ಶಿವರಾಂ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ: ಹಿರಿಯ ನಟ ಅನಂತ್ ನಾಗ್

ಹಿರಿಯ ನಟ ಶಿವರಾಂ ಅವರು 84ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್​ವುಡ್​ಗೆ ಸಾಕಷ್ಟು ಕೊಡುಗೆ ನೀಡಿದ್ದ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ಸಾಕಷ್ಟು ನೋವು ತಂದಿದೆ. ಶಿವರಾಂ ಅವರ ಬಗ್ಗೆ ಸಾಕಷ್ಟು ಹಿರಿಯ ನಟರು, ರಾಜಕಾರಣಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಅವರ ಕುಟುಂಬಕ್ಕೆ ಸಂತಾಪ ಹೇಳುವ ಕೆಲಸವನ್ನೂ ಮಾಡಲಾಗುತ್ತಿದೆ. ಚಿತ್ರರಂಗದ ಹಿರಿಯರು ಮತ್ತು ಶಿವರಾಮ್ ಅವರ ಸ್ನೇಹಿತರಾದ ನಟ ಅನಂತ್ ನಾಗ್ ಶಿವರಾಂ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ನಟ ಅನಂತ ಅಗಲಿದ ಹಿರಿಯ ನಟ ಶಿವರಾಂ ಅವರ ಅಂತಿಮ ದರ್ಶನ ಪಡೆದರು, ನಂತರ ಮಾದ್ಯಮದೊಂದಿಗೆ ಮಾತನಾಡಿದ ಅನಂತ್ ನಾಗ್,  ಪ್ರೀತಿಯ ಶಿವರಾಮಣ್ಣ ಇಂದು ನಮ್ಮನ್ನ ಬಿಟ್ಟು ಆಗಲಿದ್ದಾರೆ  ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ, ಅವರ ನನ್ನ  ಪರಿಚಯ 40 ವರ್ಷಗಳದ್ದು ಅವರು ನಾವು ಹಲವು ಸಿನಿಮಾಗಳಲ್ಲಿ ಒಟ್ಟೆಗೆ ನಟಿಸಿದ್ದೇವೆ ಶಿವರಾಮಣ್ಣ ಎಲ್ಲಾ ಪಾತ್ರಗಳನ್ನ ಲೀಲಾಜಾಲವಾಗಿ ಮಾಡಿದವರು ಹೆಚ್ಚಾಗಿ ಹಾಸ್ಯದ ಪಾತ್ರಗಳನ್ಙ ನಟಿಸಿ, ನಿರ್ದೇಸಿಸಿದ್ದಾರೆ ಎಂದು ಸ್ಮರಿಸಿದರು.

ಎಲ್ಲಾರನ್ನ ನಗಿಸುವ ಭಾವ ಅವರದ್ದು ,ನಾನು ಮತ್ತು ಅವರು ಹಚ್ಚು  ಫೋನ್ ನಲ್ಲಿ ಮಾತಾನಾಡುತ್ತಿದ್ವಿ  ಎಲ್ಲಕ್ಕಿಂತ ಹೆಚ್ಚಿನದಾಗಿ ಅವರು ಕಲಾವಿದರ ಸಂಘವನ್ನ ಸಂಘಟಿಸಿದ್ದೇ ಅವರು  ಕಲಾವಿದರ ಸಂಘದ ಕಾರ್ಯದರ್ಶಿ ಗಳಾಗಿ ನಮನ್ನೆಲ್ಲಾ ಸಂಘಟಿಸಿದ್ದಾರೆ

ಇತ್ತೀಚಿಗೆ ಅವರು ಈ ಕೆಲಸಗಳನ್ನ  ಬಿಟ್ಟಿದ್ರು ಅವರು ಸದಾ ನಮ್ಮ ಜೊತೆಗೆ ಇರ್ತಾರೆ ಕನ್ನಡ ಚಿತ್ರರಂಗದ ಒಂದು ಕಂಬವೇ ಹೌದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles