” ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳು ಅನುಪಮಾ ಥಿಯೇಟರ್‌ನಲ್ಲಿ ಬೆಳಗ್ಗೆಯಿಂದಲೇ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ರು. ಅದರಲ್ಲೂ ತುಂಬಾ ಮುಖ್ಯವಾಗಿ 450 ಕೆಜಿ ಸೇಬು ಹಣ್ಣಿನ ಹಾರವನ್ನು ಶ್ರೀಮುರಳಿ ಅವರಿಗೆ ಹಾಕಲಾಗಿದೆ. ವಿಶೇಷ ಅಂದರೆ, ಥಿಯೇಟರ್ ಮುಂದೆ ಅಭಿಮಾನಿಗಳು ಕ್ರೇನ್ ತಂದು ಅದರ ಮೂಲಕ ಸೇಬು ಹಣ್ಣಿನ ಹಾರವನ್ನು ಹಾಕಿದ್ದಾರೆ. ಈ ಸೇಬು ಹಣ್ಣಿನ ಹಾರದ ಬೆಲೆ ಬರೋಬ್ಬರಿ 80 ಸಾವಿರ ರೂಪಾಯಿ. ರೋರಿಂಗ್ ಸ್ಟಾರ್ ಅಭಿಮಾನಿಗಳಾದ ಮಹೇಶ್ ಬಾಬು ಹಾಗೂ ರವಿ ಎಂಬುವವರು ಈ ಹಾರವನ್ನು ಸಿದ್ಧಪಡಿಸಿದ್ದಾರೆ.
ಮಹೇಶ್ ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದೆ. ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ದೃಶ್ಯ ಇದೆ. ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ಕೇಳಿ ಬರುತ್ತಿದೆ. ಗಾಂಧಿ ನಗರದ ಅನುಪಮಾ ಚಿತ್ರಮಂದಿರದ ಎದುರು ಇಂದು ಸಂಭ್ರಮ ಮುಗಿಲುಮುಟ್ಟಿತ್ತು. ಇಡೀ ಚಿತ್ರತಂಡ ಇಲ್ಲಿಗೆ ಹಾಜರಿ ಹಾಕಿತ್ತು. 80 ಸಾವಿರ ಬೆಲೆ ಬಾಳುವ ಸೇಬಿನ ಹಾರವನ್ನು ಶ್ರೀಮುರಳಿಗೆ ಹಾಕಲಾಯಿತು. ಇದರ ಜತೆಗೆ ರಕ್ತದಾನ ಶಿಬಿರವನ್ನು ಕೂಡ ಅಭಿಮಾನಿಗಳು ಆಯೋಜಿಸಿದ್ದು ವಿಶೇಷವಾಗಿತ್ತು.
****