ನೆಲಮಂಗಲದ ಅಡಕಮಾರನಹಳ್ಳಿ ಹುಡ್ಗ ಗಣೇಶ್ ಗೋಲ್ಡನ್ ಸ್ಟಾರ್ ಆಗಿ ತೆರೆಮೇಲೆ ಮಿನುಗ್ತಿರೋದು ಗೊತ್ತಿರುವ ಸಂಗತಿ. ಗಣಿ ಕಷ್ಟದ ಕುಲವೆಯಲ್ಲಿ ಬೆಂದ ಅಪ್ಪಟ ಬಂಗಾರ.. ಸುರಸುಂದರ.. ಅಭಿಮಾನಿಗಳ ಹೃದಯದಲ್ಲಿ ಕಲರ್ ಫುಲ್ ಚಿಲುವಿನ ಚಿತ್ತಾರ.. ಸದಾ ಅಭಿಮಾನಿಗಳೊಟ್ಟಿಗೆ ಬೆರೆಯುವ ಸಕ್ಕರೆ ಚೆಲುವ.. ಸದ್ಯ ಸಖತ್ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಗಣಿ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಿಸಿದ್ದಾರೆ.
ಹೌದು…ಗಣೇಶ್ ಗೆ ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಇದೆ. ತೆರೆಮೇಲೆ ಬಂಗಾರದ ಹುಡ್ಗನ ಮುದ್ದಾದ ನಟನೆ , ಕಾಮಿಡಿ ನೋಡಿ ಇಷ್ಟಪಟ್ಟ ಮಂದಿಗೇನು ಕಮ್ಮಿ ಇಲ್ಲ. ಒಮ್ಮೆಯಾದ್ರೂ ಜೀವನದಲ್ಲಿ ಗಣೇಶ್ ಭೇಟಿ ಮಾಡಬೇಕೆಂಬ ಅಭಿಮಾನಿಯ ಆಸೆಯನ್ನು ಮನದುಂಬಿ ಈಡೇರಿಸಿದ್ದಾರೆ.
ಭದ್ರಾವತಿ ಮೂಲದ ಬಾಲಕಿ ಗಣೇಶ್ ಅಪ್ಪಟ ಫ್ಯಾನ್. ಮುಂಗಾರು ಮಳೆ ಸಿನಿಮಾದಿಂದ ಇಲ್ಲಿವರೆಗೆ ಗಣೇಶ್ ಅಭಿನಯದ ಎಲ್ಲಾ ಸಿನಿಮಾ ನೋಡಿರುವ ಆ ಬಾಲಕಿ ಒಮ್ಮೆಯಾದ್ರೂ ಗಣಿ ಜೊತೆ ಮಾತಾಡಬೇಕು. ಫೋಟೋ ತೆಗೆದುಕೊಳ್ಳಬೇಕು ಅನ್ನೋ ಹಂಬಲ.. ಆಸೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಆ ಬಾಲಕಿ ಕುಟುಂಬಸ್ಥರು ಇತ್ತೀಚೆಗಷ್ಟೇ ರಿಲೀಸ್ ಆದ ಗಣೇಶ್ ಹಾಗೂ ಸಿಂಪಲ್ ಸುನಿ ನಟನೆಯ ಸಖತ್ ಸಿನಿಮಾ ನೋಡೋದಿಕ್ಕೆ ಒರಿಯನ್ ಮಾಲ್ ಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಗಣೇಶ್ ಕೂಡ ಓರಿಯನ್ ಮಾಲ್ ಗೆ ಹೋಗಿದ್ದರು. ಈ ವೇಳೆ ಗಣೇಶ್ ಭೇಟಿ ಮಾಡಲಾಗದೇ ಬಾಲಕಿ ಮೂರು ದಿನ ಊಟವನ್ನೇ ಬಿಟ್ಟಿದ್ದಾಳೆ. ಆಗ ಬಾಲಕಿ ಕುಟುಂಬಸ್ಥರು ಗಣೇಶ್ ಆಪ್ತರ ಮೂಲಕ ಗಣೇಶ್ ಮನೆಗೆ ಭೇಟಿ ಕೊಟ್ಟಿದ್ದಾರೆ.
ಗಣೇಶ್ ತಮ್ಮ ನೆಚ್ಚಿನ ಅಭಿಮಾನಿ ಭೇಟಿ ಮಾಡಿ ಅಪ್ಪುಗೆ ಕೊಟ್ಟು ಪ್ರೀತಿಯಿಂದ ಮಾತಾನಾಡಿಸಿದ್ದಾರೆ. ಊಟ ಎಲ್ಲಾ ಬಿಡಬಾರದು ಅಂತಾ ಕಿವಿ ಮಾತು ಹೇಳಿದ್ದಾರೆ. ಗಣೇಶ್ ಗೆ ಮಾಮಾ ಅಂತಾ ಬಾಲಕಿ ಅಚ್ಚುಮೆಚ್ಚಿನಿಂದ ಮಾತಾಡಿಸಿದ್ದಾಳೆ. ಅಭಿಮಾನಿಯನ್ನು ಮನೆಗೆ ಕರೆಸಿ ವಿಶೇಷವಾಗಿ ಸತ್ಕಾರಿಸಿರುವ ಗಣಿ ಗೋಲ್ಡನ್ ಹಾರ್ಟ್ ಗೆ ಫ್ಯಾನ್ಸ್ ಉಘೇ ಉಘೇ ಅಂತಿದ್ದಾರೆ.
****