21.8 C
Bengaluru
Wednesday, November 30, 2022
spot_img

ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ಬಂದ ಹಿರಿಯ ಕಲಾವಿದರು

ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಪರಿಣಾಮ ಶಿವರಾಂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಹೊಸಕೆರೆಹಳ್ಳಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಟ ಶಿವರಾಂ ಅವರು ಕೋಮಾದಲ್ಲಿದ್ದಾರೆ.

ಹಿರಿಯ ನಟ ಶಿವರಾಂ ಅವರಿಗೆ ಅನಾರೋಗ್ಯ ಉಂಟಾಗಿರುವ ವಿಚಾರ ತಿಳಿದ ಕೂಡಲೆ ಹಿರಿಯ ನಟ ದೊಡ್ಡಣ್ಣ, ಹಿರಿಯ ನಟಿ ಗಿರಿಜಾ ಲೋಕೇಶ್, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸೇರಿದಂತೆ ತಾರೆಯರು ಆಸ್ಪತ್ರೆಗೆ ದೌಡಾಯಿಸಿದರು. ‘’ಆದಷ್ಟು ಬೇಗ ಶಿವರಾಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿ, ನಟ ಶಿವರಾಂ ಶೀಘ್ರದಲ್ಲಿ ಗುಣಮುಖರಾಗಲಿ’’ ಎಂದು ತಾರೆಯರು ಪ್ರಾರ್ಥಿಸಿದರು.

’ಅವರು ಬೇಗ ಹುಷಾರಾಗಿ, ಆಸ್ಪತ್ರೆಯಿಂದ ಹೊರಗಡೆ ಬರಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಅವರು ಚೆನ್ನಾಗಿಯೇ ಇದ್ದರು. ಯಾವ ವಿಷಯದ ಬಗ್ಗೆಯೇ ಕೇಳಿದರೂ, ಚೆನ್ನಾಗಿ ಹೇಳಿಕೊಡುತ್ತಿದ್ದರು. ಕಳೆದ ವಾರವಷ್ಟೇ ನಾನು ಅವರೊಂದಿಗೆ ಅಭಿನಯ ಮಾಡಿದ್ದೆ. ‘ಸತ್ಯ’ ಧಾರಾವಾಹಿಯಲ್ಲಿ ನಾನು ಹಾಗೂ ಅವರು ಆಕ್ಟ್ ಮಾಡುತ್ತಿದ್ವಿ. ಆ ವಯಸ್ಸಿನಲ್ಲೂ ಡೈಲಾಗ್ ಹೇಳುವ ಜ್ಞಾಪಕ ಶಕ್ತಿ ಅವರಿಗಿದೆ. ಅವರಿಗೆ ಏನೂ ಆಗದೇ ಇರಲಿ. ಯಾರಿಗೇ ಹುಷಾರಿಲ್ಲ ಅಂದರೂ ಫಸ್ಟ್ ಶಿವರಾಮಣ್ಣ ಬಂದು ಇರುತ್ತಿದ್ದರು. ಆ ತರಹದ ವ್ಯಕ್ತಿ ಅವರು. ಎಲ್ಲರ ಹಾರೈಕೆಯಿಂದ ಅವರು ಗುಣವಾಗಲಿ’’ – ಗಿರಿಜಾ ಲೋಕೇಶ್


‘’ಅವರು ಚಿಕಿತ್ಸೆಗೆ ಸ್ಪಂದಿಸಬೇಕು. ಆದಷ್ಟು ಬೇಗ ಅವರು ಎದ್ದು ಬರಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ. ಅವರಿಗೆ ಒಳ್ಳೆಯದ್ದಾಗಲಿ’’ – ಭಾರತಿ ವಿಷ್ಣುವರ್ಧನ್

‘’ಶಿವರಾಮಣ್ಣನ ಅನಾರೋಗ್ಯದ ವಿಷಯ ಕೇಳಿ ಮನಸ್ಸಿಗೆ ಬಹಳ ಆಘಾತವಾಯಿತು. ಡಾ.ರಾಜ್‌ಕುಮಾರ್ ಅವರ ಕಾಲದಿಂದ ನಟನಾಗಿ, ನಿರ್ಮಾಪಕನಾಗಿ ಅವರು ಸವೆಸಿರುವ ದಾರಿಯನ್ನು ಮರೆಯಲು ಸಾಧ್ಯವಿಲ್ಲ. ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಅನ್ನೋದೇ ನನ್ನ ಹಾರೈಕೆ’’ – ದೊಡ್ಡಣ್ಣ

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles