22.9 C
Bengaluru
Sunday, March 26, 2023
spot_img

‘ರಾಕಿಂಗ್ ಸ್ಟಾರ್’ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಆಯ್ರಾಳ 3ನೇ ವರ್ಷದ ಹುಟ್ಟುಹಬ್ಬ ಸಂಭ್ರಮ!

ಸ್ಯಾಂಡಲ್ ವುಡ್ ನ ಸ್ಟಾರ್ ದಂಪತಿಗಳಾದ ರಾಕಿಂಗ್​ ಸ್ಟಾರ್​’ ಯಶ್​ ಮತ್ತು ರಾಧಿಕಾ ಪಂಡಿತ್​ ಪುತ್ರಿ ಆಯ್ರಾ ಯಶ್​ ಗೆ ಇಂದು (ಡಿ.2) ಜನ್ಮದಿನದ ಸಂಭ್ರಮ. ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈಗಾಗಲೇ ಆಯ್ರಾ ತುಂಬ ಫೇಮಸ್​ ಆಗಿದ್ದಾಳೆ. ಆಕೆಯ ಫೋಟೋಗಳು ಸಖತ್​ ವೈರಲ್​ ಆಗುತ್ತವೆ.

ರಾಧಿಕಾ ಪಂಡಿತ್​ ಅವರು ಆಗಾಗ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹುಟ್ಟುಹಬ್ಬದ ಪ್ರಯುಕ್ತ ಮಗಳ ಜತೆ ಇರುವ ಫೋಟೋವನ್ನು ರಾಧಿಕಾ ಪಂಡಿತ್​ ಇಂದು ಪೋಸ್ಟ್​ ಮಾಡಿದ್ದಾರೆ. ಅದರ ಜತೆಗೆ ಅವರು ಬರೆದುಕೊಂಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ನಿನ್ನ ಕೈ ಹಿಡಿದುಕೊಳ್ಳಲು ಯಾವಾಗಲೂ ಇರುತ್ತೇನೆ. ಹ್ಯಾಪಿ ಬರ್ತ್​ಡೇ ಏಂಜಲ್​. ಆಯ್ರಾಗೆ ಇಂದು ಮೂರು ವರ್ಷ ಆಯ್ತು. ಎಷ್ಟು ಬೇಗ ಸಮಯ ಕಳೆಯುತ್ತದೆ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದಾರೆ.

ಮಗಳು ಆಯ್ರಾ ಹಾಗೂ ಮಗ ಯಥರ್ವ್​ ಯಶ್​ ಆರೈಕೆಯಲ್ಲಿ ​ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್​ ಅಪೇಕ್ಷಿಸುತ್ತಿದ್ದಾರೆ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ರಾಧಿಕಾ ಶೀಘ್ರವೇ ಖಂಡಿತ ಕಮ್​ ಬ್ಯಾಕ್​ ಮಾಡಲಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles