31.5 C
Bengaluru
Tuesday, March 28, 2023
spot_img

ಮದಗಜ ದ ‘ತಾಂಡವ’ ಪಾತ್ರ ನೋಡಿದ ಮಕ್ಕಳು ನನ್ನ ಹತ್ರ ಬರೋದಿಲ್ಲಾ ‘ಗರುಡ ರಾಮ್’

ಗರುಡ’ ಪಾತ್ರದಲ್ಲಿನ ನಟನೆಯಿಂದಾಗಿ ಮೂರು ವರ್ಷಗಳ ನಂತರವೂ ರಾಮ್ ಅವರನ್ನು ಹಲವರು ಗರುಡ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಬಹಳ ಪ್ರಸಿದ್ಧಿ ಗಳಿಸಿದ್ದರು. ಸದ್ಯ ರಾಮ್ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾದಲ್ಲಿ ಖಳನಾಯಕನ (ತಾಂಡವ) ಪಾತ್ರದಲ್ಲಿ ಅಭಿನಯಸಿದ್ದಾರೆ.

ಕೆಜಿಎಫ್ ನಂತರ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಾನು ಬ್ಯುಸಿಯಾಗಿದ್ದೆ, ಜೊತೆಗೆ ಕೊರೋನಾ ಸಾಂಕ್ರಾಮಿಕದಿಂದಾಗಿಯೂ ಕನ್ನಡ ಸಿನಿಮಾಗಳಿಂದ ದೂರ ಉಳಿಯುವಂತಾಯಿತು. ಮದಗಜದಲ್ಲಿ ತಾಂಡವ ಎಂಬ ಪಾತ್ರದಲ್ಲಿ ರಾಮ್ ನಟಿಸುತ್ತಿದ್ದಾರೆ, ಚಿನ್ನದ ಹಲ್ಲು ಮತ್ತು ಒಂದು ಕಣ್ಣಿನೊಂದಿಗೆ ಚಿತ್ರದಲ್ಲಿ ನನ್ನನ್ನು ಬದಲಾವಣೆ ಮಾಡಲಾಗಿದೆ. ತಾಂಡವ ಪಾತ್ರ ಉಗ್ರವಾಗಿದ್ದು, ಈ ಪಾತ್ರವನ್ನು ನೋಡುವ ಮಕ್ಕಳು ನನ್ನ ಬಳಿ ಬರಲು ಭಯಪಡಬಹುದು ಎಂದು ಹೇಳಿದ್ದಾರೆ.

ಕೆಜಿಎಫ್‌ನಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಮ್, ‘ಇದು ನನ್ನ ವೃತ್ತಿಜೀವನದಲ್ಲಿ ಒಂದು ಪ್ರಮುಖ ಘಟ್ಟ. ಆ ಚಿತ್ರದಿಂದ ನಾನು ಪಡೆದ ಖ್ಯಾತಿಗೆ ಮಿತಿಯಿಲ್ಲ. ಗರುಡನ ಪಾತ್ರ ಶಾಶ್ವತವಾಗಿ ಉಳಿಯುತ್ತದೆ. ಈಗ ಮತ್ತು ಭವಿಷ್ಯದಲ್ಲಿ ನನಗೆ ಯಾವುದೇ ಪಾತ್ರಗಳನ್ನು ನೀಡಲಾಗಿದ್ದರೂ ಅದು ಬೋನಸ್ ಮಾತ್ರ ಆಗಿರುತ್ತದೆ ಎಂದು ಹೇಳಿದ್ದಾರೆ.

ಸಾಮಾನ್ಯ ಚಿತ್ರಗಳಿಗಿಂತ ಮಾಸ್ ಎಂಟರ್‌ ಟೈನರ್‌ ಗಳಲ್ಲಿ ಖಳನಾಯಕನ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಎಂದು ರಾಮ್ ಅಭಿಪ್ರಾಯಪಟ್ಟಿದ್ದಾರೆ. ಮದಗಜದಲ್ಲಿ ಅವರು ನಾಯಕನ ವಿರುದ್ಧ ಹೋರಾಡುವುದಕ್ಕಿಂತ ಹೆಚ್ಚಿನದನ್ನು ವಿಲ್ಲನ್ ಮಾಡಬೇಕಾಗಿದೆ. ತಾಂಡವಕ್ಕೂ ನಿರ್ದೇಶಕರು ಉತ್ತಮ ಇಮೇಜ್ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ, ಅವನು ತನ್ನ ತಂದೆಯ ಆದೇಶವನ್ನು ಪಾಲಿಸುತ್ತಾನೆ ಎಂದು ಮದಗಜದ ಬಗ್ಗೆ ರಾಮ್ ಬಹಿರಂಗಪಡಿಸಿದ್ದಾರೆ. ಸದ್ಯ ರಾಮ್ ಬಳಿ ಎರಡು ಕನ್ನಡ ಚಿತ್ರಗಳಿವೆ – ರೈಡರ್ (ನಿಖಿಲ್ ಕುಮಾರಸ್ವಾಮಿ ನಟಿಸಿದ್ದಾರೆ, ಡಿಸೆಂಬರ್ 24 ರಂದು ಬಿಡುಗಡೆಯಾಗಲಿದೆ) ಮತ್ತು ಪ್ರಣಮ್ ದೇವರಾಜ್ ಅವರ ಮತ್ತೊಂದು ಚಿತ್ರದಲ್ಲಿ ರಾಮ್ ಅಭಿನಯಿಸುತ್ತಿದ್ದಾರೆ. ‘ನಾನು ಇನ್ನೂ ಒಂದೆರಡು ಪ್ರಾಜೆಕ್ಟ್ ಗಳಿಗೆ ಮಾತುಕತೆ ನಡೆಸುತ್ತಿದ್ದೇನೆ. ಈ ಯೋಜನೆಗಳ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles