ಪುನೀತ್ ರಾಜಕುಮಾರ್ ತೀರಿಕೊಂಡು ತಿಂಗಳಾಗುತ್ತಾ ಬರುತ್ತಿದೆ ಆದರೆ ಅವರ ಸಾವಿನ ನೋವನ್ನು ಮರೆಯಲು ಸಾದ್ಯವಾಗುತ್ತಿಲ್ಲ, ಪುನೀತ್ ಸಾವಿನಿಂದ ಮನನೊಂದು ನೋವನ್ನು ತಾಳಲಾರದೆ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರು. ಹಾಸನದಲ್ಲಿ ಪುನೀತ್ ಅಭಿಮಾನಿಯೊಬ್ಬ (ನ 24) ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಹಾಸನ ನಗರದ ಮಯೂರ ಎಂಬುವವರು ಅಪ್ಪು ನಿಧನದಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ. ಪುನೀತ್ ನಿಧನದ ಬಳಿಕ ಖಿನ್ನತೆಗೊಳಗಾಗಿ ಮಂಕಾಗಿದ್ದ ಮಯೂರ ಇದೀಗ ನೇಣಿಗೆ ಶರಣಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ಹಾಸನದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಪುತ್ರನಾಗಿದ್ದಾರೆ.

ನಟ ಪುನೀತ್ ಅವರ ದೊಡ್ಡ ಅಭಿಮಾನಿಯಾಗಿದ್ದ ಮಯೂರ, ಅಪ್ಪು ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಅವರ ಸಾವಿನ ಬಳಿಕ ಆಘಾತಗೊಂಡು, ಮಾನಸಿಕವಾಗಿ ನೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಅಪ್ಪುವಿನ ಹತ್ತಾರು ಸ್ಟೇಟಸ್ ಹಾಕಿಕೊಂಡು ದುಃಖ ಹೊರಹಾಕುತ್ತಿದ್ದರು. ನೆನ್ನೆ (ನವೆಂಬರ್ 24) ಸಂಜೆ ಹಾಸನ ನಗರದ ರಾಜಕುಮಾರ ನಗರದ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪುನೀತ್ ಆದರ್ಶಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಮಯೂರನ ಸಾವಿನ ನಂತರ ತನ್ನ ಕಣ್ಣುಗಳನ್ನು ದಾನ ಮಾಡಬೇಕೆಂದು ಪತ್ರ ಬರೆದು ಸಾವಿಗೆ ಶರಣಾಗಿದ್ದಾರೆ. ಪುನೀತ್ ಅಭಿಮಾನಿ ಮಯೂರನ ಇಚ್ಛೆಯಂತೆ ಮಯೂರನ ಕುಟುಂಬದವರು ಆತನ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.
****