ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ 2022, ಏ.14, ರಂದು ಥಿಯೇಟರ್‌ನಲ್ಲಿ ಅಬ್ಬರಿಸಲಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರವಿದು. ಕೆಜಿಎಫ್‌ನ ಮೊದಲ ಭಾಗ 21 ಡಿಸೆಂಬರ್ 2018ರಲ್ಲಿ ತೆರೆಗೆ ಬಂದು ಹೊಸ ದಾಖಲೆ ನಿರ್ಮಿಸಿತ್ತು.
ಸದ್ಯದ ವಿಷಯವೆಂದರೇ ಕೆಜಿಎಫ್ 2 ಬಿಡುಗಡೆಯಾಗುವ ದಿನವೇ ಅಮೀರ್ ಖಾನ್ ನಟನೆಯ ‘ಲಾಲ್‌ಸಿಂಗ್ ಛಡ್ಡಾ’ ಚಿತ್ರವೂ ಬಿಡುಗಡೆಯಾಗಲಿದೆ. ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ಪ್ರೇಕ್ಷಕ ಯಾವುದನ್ನು ಆರಿಸಿಕೊಳ್ಳಬಹುದು ಅನ್ನುವುದು ಸದ್ಯದ ಕುತೂಹಲ.
ಆದರೆ ಅಮೀರ್ ಖಾನ್‌ನಂಥಾ ಅಮೀರ್ ಖಾನ್‌ಗೆ ಕೊಂಚ ಗೊಂದಲ ಶುರುವಾದಂತಿದೆ. ಕೆಜಿಎಫ್ 2ನ ಎದುರು ತನ್ನ ಸಿನಿಮಾ ನಿಲ್ಲಬಹುದಾ ಎಂಬ ಸಣ್ಣ ಅನುಮಾನ ಬಂದ ಹಾಗಿದೆ. ಹೀಗಾಗಿಯೇ ಅವರು ಕೆಜಿಎಫ್ 2 ಬಿಡುಗಡೆ ದಿನಾಂಕ ಮುಂದೂಡಲು ಸಾಧ್ಯವೇ ಎಂದು ಚಿತ್ರತಂಡದ ಜೊತೆಗೆ ಚರ್ಚೆ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನವೇ `ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನೂ ರಿಲೀಸ್ ಮಾಡುತ್ತಿರುವುದಕ್ಕೆ ಅಮೀರ್ ಖಾನ್ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಗೆ ಟೆಕ್ಟ್ಸ್ ಮೆಸೇಜ್ ಮಾಡಿ ಕ್ಷಮೆ ಕೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಮೀರ್, ನಾನು ಬೇರೆಯವರನ್ನು ಅತಿಕ್ರಮಿಸಿಕೊಳ್ಳುತ್ತಿದ್ದೇನೆ ಎಂಬ ಭಾವನೆ ಸೃಷ್ಟಿ ಆಗುವುದನ್ನು ದ್ವೇಷಿಸುತ್ತೇನೆ, ಆದರೆ ನಾನು ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಏಪ್ರಿಲ್ 14ರಂದು ಬೈಸಾಖಿ ದಿನ ಸಿನಿಮಾ ರಿಲೀಸ್ ಮಾಡುವುದು ಸೂಕ್ತ ಎಂದು ಭಾವಿಸಿದ್ದೆ. ಹೀಗಾಗಿ ನಾನು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್ ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.
ಬೈಸಾಖಿ ದಿನ ನನ್ನ ಸಿನಿಮಾ ಬಿಡುಗಡೆಯಾದರೆ ಸೂಕ್ತ ಎಂದು ಅವರಿಗೆ ತಿಳಿಸಿದೆ. ಅವರು ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡರು. ಅವರ ಸಿನಿಮಾ ರಿಲೀಸ್ ಇದ್ದರೂ ಅದೇ ನೀವು ಸಿನಿಮಾ ಬಿಡುಗಡೆ ಮಾಡಿ ಎಂದು ನನಗೆ ಹೇಳಿದರು. ಅವರ ಸ್ಪಂದನೆ ನನಗೆ ಇಷ್ಟ ಆಯಿತು. ನನ್ನ ಯೋಚನೆಗೆ ಯಶ್ ತುಂಬಾ ಬೆಂಬಲವಾಗಿ ನಿಂತರು ಎಂದು ಅಮೀರ್ ಹೇಳಿಕೊಂಡಿದ್ದಾರೆ.
****