ನೀರ್ ದೋಸೆ ನಂತರ ಮತ್ತೆ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಒಂದಾಗಿದ್ದು, ತೋತಾಪುರಿ ಸಿನಿಮಾ ಮೂಲಕ ಮಾತಿನ ಕಚಗುಳಿ ಇಡಲು ತಯಾರಿ ನಡೆಸಿದ್ದಾರೆ.
“ಮೋಡ ಕವಿದ ವಾತಾವರಣದಲ್ಲೆ ಮೊಡವೆ ಬರಬೇಕೇ…? ಥತ್ತೇರಿಕೆ..! ಎಂಬ ಸಾಲುಗಳನ್ನು ಬರೆದಿರುವ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ.
ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಧನಂಜಯ್ ಕೂಡ ಈ ಸಿನಿಮಾದಲ್ಲಿ ನಾರಾಯಣ ಪಿಳ್ಳಾಯಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮನ್ ರಂಗನಾಥ್ ಕೂಡ ತೋತಾಪುರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೋತಾಪುರಿಗೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.
****