25.6 C
Bengaluru
Thursday, December 8, 2022
spot_img

ನ.25ಕ್ಕೆ ರೇಮೊ ಫಸ್ಟ್ ಲುಕ್ ಟೀಸರ್ ಲಾಂಚ್..!

ಸ್ಯಾಂಡಲ್ವುಡ್ ಟಾಪ್ ಡೈರೆಕ್ಟರ್- ಪ್ರಡ್ಯೂಸರ್ ಗಳಿಂದ ರೇಮೊ ಟೀಸರ್ ಲಾಂಚ್ ನ.25ಕ್ಕೆ ರೇಮೊ ಫಸ್ಟ್ ಲುಕ್ ಟೀಸರ್ ಲಾಂಚ್.

ಬಹು ನಿರೀಕ್ಷಿತ ಪವನ್ ಒಡೆಯರ್ ನಿರ್ದೇಶನದ , ಜಯಾದಿತ್ಯ ಬ್ಯಾನರ್ ಅಡಿಯಲ್ಲಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದ ‘ರೇಮೊ’ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ನೇ ತಾರೀಖು ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ.

ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕನಾಗಿ , ಅಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈದಿ ಛಾಯಾಗ್ರಹಣವಿರೋ ಈ ಚಿತ್ರದ ಮೇಲೆ ಉದ್ಯಮದಲ್ಲಿ  ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ.

ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಕುಂಬಳ ಕಾಯಿ ಒಡೆದು ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರೋ ಚಿತ್ರತಂಡ. ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ. ಈ ನಡುವೆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದು,, ಈ ಟೀಸರ್ ನ ಚಿತ್ರರಂಗದ ಟಾಪ್  ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ.  ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗ್ತಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles