ಡಾ. ವಿ. ರವಿಚಂದ್ರನ್ ಅಭಿನಯದಲ್ಲಿ ಬಿ.ಎಂ.ಗಿರಿರಾಜ್ ನಿರ್ದೇಶನದ, ಐತಿಹಾಸಿಕ ಕಥಾಹಂದರ ಹೊಂದಿರುವ ‘ಕನ್ನಡಿಗ’ ಸಿನಿಮಾದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ.
ಈ ಹಾಡನ್ನು ಡಾ ಶಿವರಾಜಕುಮಾರ್ ಹಾಡಿದ್ದಾರೆ, ಹಾಡಿನ ಸಾಹಿತ್ಯವನ್ನು ಸಂತೋಷ್ ಆನಂದ್ ರಾಮ್ ರಚಿಸಿದ್ದು ಹಾಡಿನಲ್ಲಿ ಕನ್ನಡದ ಸೊಗಡಿದೆ, ಕನ್ನಡದ ಕಂಪಿದೆ, ಕನ್ನಡ ನಾಡಿನ ಕನ್ನಡ ಭಾಷೆಯ ಗತ ವೈಭವವನ್ನು ಸಾರುವ ಸಾಹಿತ್ಯವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಸಂತೋಷ್ ಆನಂದ್ ರಾಮ್. “ಕನ್ನಡಿಗ” ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ ವಿ.ರವಿಚಂದ್ರನ್,ಪಾವನಾ, ಜೀವಿಕಾ ಜಗದೀಶ್ ಮೈತ್ರಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಗುರುದತ್ ಅಭಿನಯಿಸಿದ್ದಾರೆ.
‘ಜಟ್ಟ’ ಮತ್ತು ‘ಮೈತ್ರಿ’ ಎರಡು ಸಿನಿಮಾಗಳನ್ನು ನಿರ್ಮಿಸಿದ್ದ ಎನ್.ಎಸ್. ರಾಜಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಜಿ.ಎಸ್.ವಿ. ಸೀತಾರಾಮ್ ಛಾಯಾಗ್ರಹಣ ಮಾಡುತ್ತಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅರ್ಜುನ್ ಕಿಟ್ಟು ಸಂಕಲನ ಮಾಡುತ್ತಿದ್ದು, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ‘ಕನ್ನಡಿಗ’ ಚಿತ್ರಕ್ಕಿದೆ.
****