‘ಹೀರೋ’ ಸಿನಿಮಾ ಖ್ಯಾತಿಯ ನಾಯಕಿ ಗಾನವಿ ಲಕ್ಷ್ಮಣ್- ಚಕ್ರವರ್ತಿ ಜೋಡಿಯ “ಭಾವಚಿತ್ರ” ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಗೆ ಬರುತ್ತಿದೆ. ಗಿರೀಶ್ ಕುಮಾರ್ ನಿರ್ದೇಶನದ “ಭಾವಚಿತ್ರ” ಟೆಕ್ನೋ ಥ್ರಿಲ್ಲರ್, ಸೆಂಟಿಮೆಂಟ್ ಸನ್ನಿವೇಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಥ್ರಿಲ್ಲರ್ ಮಾದರಿಯ ಸಿನಿಮಾ ಆಗಿದ್ದರೂ ರೊಮ್ಯಾಂಟಿಕ್ ಆಗಿಯೂ ಇರಲಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಗಿರೀಶ್ ಕುಮಾರ್ ಈ ಹಿಂದೆ “ಆವಾಹಯಾಮಿ” ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು.