“ಅಕ್ಷಿ” ನೇತ್ರದಾನದ ಮಹತ್ವವನ್ನು ಸಾರುವ ಈ ಚಿತ್ರ ಈಗಾಗಲೇ ರಾಷ್ಟ ಪ್ರಶಸ್ತಿಯನ್ನು ಪಡೆದಿದ್ದು, ಈಗ ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ. ಡಿಸೆಂಬರ್ 3 ರಂದು ಅಕ್ಷಿ ಸಿನಿಮಾ ಬಿಡುಗಡೆ ಆಗಲಿದೆ. ಡಾ ರಾಜಕುಮಾರ್ ಅವರ ನೇತ್ರದಾನದ ಪ್ರೇರಣೆಯಿಂದ ನಿರ್ಮಾಣವಾಗಿರುವ ಈ ಚಿತ್ರದ ಹಂಚಿಕೆಯ ಜವಬ್ದಾರಿಯನ್ನು ನಿರ್ಮಾಕರಾದ ಜ್ಯಾಕ್ ಮಂಜು ಹೊತ್ತುಕೊಂಡಿದ್ದಾರೆ.
ಅಕ್ಷಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಯಾಕ್ ಮಂಜು ರಾಷ್ಟ್ರ ಪ್ರಶಸ್ತಿ ಚಿತ್ರಗಳಿಗೆ ಥಿಯೇಟರ್ ಗಳನ್ನು ನೀಡಿ ಎಂದು ಬೇಡಿಕೊಳ್ಳುವಂತ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕಮರ್ಷಿಯಲ್ ಸಿನಿಮಾಗಳಿಗೆ ಜನ ಬರದೆ ಇರುವುದನ್ನು ನಾವು ನೋಡಿದ್ದೇವೆ. ರಾಷ್ಟ್ರ ಪ್ರಶಸ್ತಿ ಚಿತ್ರಗಳನ್ನು ಬೇರೆ ರೀತಿ ನೋಡಬೇಡಿ ಕಣ್ಣಂಚಿನಲ್ಲಿ ನೀರು ತರಿಸುವ ಸಿನಿಮಾ ಇದು ಎಂದರು.
****