ಅಜಿತ್ ಕುಮಾರ್ ಜೆ ನಿರ್ದೇಶಿಸಿ ನಟಿಸಿರುವ “ರೈಮ್ಸ್” ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ತುಂಬಾ ಕುತೂಹಲ ಕೆರಳಿಸುವ ಲಿರಿಕಲ್ ವಿಡಿಯೋ ಸಾಂಗ್ ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸುವಂತಿದೆ. ಒಂದು ಕೊಲೆಯ ತನಿಖೆ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು. ಈ ಹಿಂದೆ ಈ ರೀತಿಯ ಜಾನರ್ ನಲ್ಲಿ ಬಂದಿರುವ ಸಿನಿಮಾಗಳಿಗಿಂತ “ ರೈಮ್ಸ್” ಭಿನ್ನ ಎನ್ನುತ್ತಿದೆ ಚಿತ್ರತಂಡ, ಚಿತ್ರದ ಬಹುತೇಕ ಕೆಲಸಗಳು ಕಂಪ್ಲೀಟ್ ಆಗಿದ್ದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
ಸ್ಕ್ವೇರ್ ಕಾನ್ಸೆಪ್ಟ್ಸ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ಚಿತ್ರದ ತಾರಾಬಳಗದಲ್ಲಿ ಅಜಿತ್ ಜಯರಾಜ್, ಶುಭಾ ಪೂಂಜಾ, ಸುಷ್ಮಾ ನಾಯರ್, ಅಭಿನಯ, ಮಿಮಿಕ್ರಿ ಗೋಪಿ, ಅಪರ್ಣಾ, ಚನ್ನರಾಜು ಇದ್ದರೆ,
ಚಿತ್ರಕ್ಕೆ ಸಂಗೀತ ಸಂಯೋಜನೆ, ಶಕ್ತಿ (ಸಕ್), ಸಾಹಿತ್ಯ, ಯುವರಾಜು ಎಂಬಿರಿ, ಗಾಯನ ಶಿವಾತ್ಮಿಕಾ ವೆಂಕಟ್ರಮಣ (ಕಿಡ್ಡೋ) ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ ಜ್ಞಾನಶೇಖರ್ ಸಿದ್ದಯ್ಯ, ರವಿಕುಮಾರ್, ಗಿರೀಶ್, ರಮೇಶ್ ಆರ್ಯ, ಛಾಯಾಗ್ರಹಣ ಅರ್ಜುನ್ ಅಕಾಟ್.ಸಂಪಾದಕ ಸಂತೋಷ್ ಟಿ. ಸಂಭಾಷಣೆ ಅಜಿತ್ ಕುಮಾರ್, ವಿಜೆ ದೀಪಕ್ ಮತ್ತು ವಸುಂಧರಾ. ಅಸೋಸಿಯೇಟ್ ಡೈರೆಕ್ಟರ್ ಎಂ ಎಸ್ ಅಂತೋನಿ ದಿನೇಶ್ ಮತ್ತು ಎನ್ ಕೆ ಗಂಗಾಧರ ತುವಿಜತ್. ಸಹಾಯಕ ನಿರ್ದೇಶಕರು ಸಾಯಿ ತೇಜಾ ರೆಡ್ಡಿ, ದಿಲೀಪ್ ಕುಮಾರ್, ಯುವರಾಜು ಎಂಬಿರಿ, ಅಕ್ಷಯ್ ರಾಮ್, ಪ್ರಶಾಂತ್ ಮೆಲ್ವಿನ್. ಕಲಾ ನಿರ್ದೇಶಕ: ಕಿಶನ್ ಕಿಶು ಅವರದ್ದಾಗಿದೆ.
****