ಸ್ಯಾಂಡಲ್ ವುಡ್ ನಲ್ಲಿ ಸಕತ್ ಸೌಂಡ್ ಮಾಡಿದ್ದ ದೃಶ್ಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇದು ಮಲೆಯಾಳಂನ ದೃಶ್ಯಂ ಚಿತ್ರದ ರಿಮೇಕ್ ಆಗಿತ್ತು. ಚಿತ್ರವನ್ನು ನಿರ್ದೇಶಕ ಪಿ ವಾಸು ಕನ್ನಡದ ನೇಟಿವಿಟಿಗೆ ಚೆನ್ನಾಗಿ ಕನೆಕ್ಟ್ ಆಗುವಂತೆ ನಿರೂಪಣೆ ಮಾಡಿದ್ದರು. ಈಗ ಮತ್ತೆ ಅದೇ ತಂಡ ಮಲೆಯಾಳಂ ನ ದೃಶ್ಯಂ 2 ಚಿತ್ರವನ್ನು ರಿಮೇಕ್ ಮಾಡಿದ್ದೆ ಮತ್ತು ಕನ್ನಡಲ್ಲಿ ದೃಶ್ಯ 2 ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.
ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ದೃಶ್ಯ 2′ ಟ್ರೈಲರ್ ರಿಲೀಸ್‌ಗೆ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ನಿರ್ದೇಶಕ ಪಿ ವಾಸು ಟ್ರೈಲರ್‌ಗೊಂದು ಟೀಸರ್ ಬಿಟ್ಟು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಕನ್ನಡದಲ್ಲಿ ದೃಶ್ಯ ಮೊದಲ ಚಾಪ್ಟರ್ ಏಳು ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಈಗ ಅದೇ ನಂಬಿಕೆ ಮೇಲೆ ರವಿಚಂದ್ರನ್ ಮತ್ತೆ ರಾಜೇಂದ್ರ ಪೊನ್ನಪ್ಪನ ಗೆಟಪ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
‘ದೃಶ್ಯ 2’ ಟ್ರೈಲರ್ ನವೆಂಬರ್ 26ಕ್ಕೆ ರಿಲೀಸ್ ಆಗುತ್ತಿದೆ. ಆದರೆ, ಸಿನಿಮಾ ಬಿಡುಗಡೆಗೆ ಹೆಚ್ಚು ಸಮಯವೇನು ಇಲ್ಲ. ‘ದೃಶ್ಯ 2’ ಟ್ರೈಲರ್ ರಿಲೀಸ್ ಆದ ಎರಡು ವಾರಕ್ಕೆ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಡಿಸೆಂಬರ್ 10 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪತ್ನಿಯಾಗಿ ಮಲಯಾಳಂ ನಟಿ ನವ್ಯಾ ನಾಯರ್ ಮುಂದುವರೆದ್ದಾರೆ.