ನ.19 ರಂದು ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘100’ ಸಿನಿಮಾವನ್ನು ಇನ್ಫೋಸಿಸ್ ಸುಧಾ ಮೂರ್ತಿ ಅವರು ಕೂಡ ವೀಕ್ಷಣೆ ಮಾಡಿದ್ದು, ಮನಸಾರೆ ಹೊಗಳಿದ್ದಾರೆ. ಈ ಚಿತ್ರ ಅವರಿಗೆ ಬಹಳ ಇಷ್ಟ ಆಗಿದೆ. ಇದು ಇಡೀ ಫ್ಯಾಮಿಲಿ ಕುಳಿತು ನೋಡಬೇಕಾದ ಚಿತ್ರ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ‘100’ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಚಿತಾ ರಾಮ್ , ಪೂರ್ಣಾ, ವಿಶ್ವಕರ್ಣ ಮುಂತಾದವರು ಅಭಿನಯಿಸಿದ್ದಾರೆ. ಎಂ. ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ಪ್ರೇಕ್ಷಕರಿಂದಲೂ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
‘ನಾನು 100 ಸಿನಿಮಾ ನೋಡಿದೆ. ಈ ಚಿತ್ರ ಬಹಳ ಚೆನ್ನಾಗಿದೆ. ಇತ್ತೀಚೆಗೆ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ಗೆ ಅಡಿಕ್ಟ್ ಆದವರು ಅಪರಿಚಿತರ ಜೊತೆ ಗೆಳೆತನ ಬೆಳೆಸುತ್ತಾರೆ. ಗೆಳೆತನ ಮಾಡುವುದು ತಪ್ಪಲ್ಲ. ಆದರೆ ಗೊತ್ತಿಲ್ಲದ ಜನರ ಜೊತೆ ನಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ತಪ್ಪು. ಅದರಿಂದ ಇಡೀ ಕುಟುಂಬಕ್ಕೆ ಏನೆಲ್ಲ ತೊಂದರೆ ಆಗಬಹುದು ಎಂಬುದನ್ನು ಈ ಚಿತ್ರ ವಿವರಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಒಳ್ಳೆಯ ಸಿನಿಮಾ ಬಂದಿರುವುದು ತುಂಬ ಕಡಿಮೆ. ಈ ಚಿತ್ರವನ್ನು ನಾನು ಬಹಳ ಎಂಜಾಯ್ ಮಾಡಿದೆ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
****