ಸ್ಯಾಂಡಲ್ ವುಡ್ ನ ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರ ‘ತೋತಾಪುರಿ’ ಚಿತ್ರ ತಂಡದಿಂದ ಮತ್ತೊಂದು ಸುದ್ದಿ ಹೊರಬಿದದ್ದಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯ ಮಾಡಿಕೊಡಲಿದೆ.
ಇಂದು ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಚಿತ್ರದ ನಾಯಕ ಜಗ್ಗೇಶ್ ಅವರ ಪರಿಚಯವಿದ್ದು ತೋತಾಪುರಿ ಚಿತ್ರದಲ್ಲಿ ಈರೇಗೌಡನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. “ ಮಣ್ಣಿನ ಮಮತೆ ಮನುಷ್ಯನಿಗೆ ದಕ್ಕಿದಾಗಲೇ ಮಂದಿರ, ಮಸೀದಿ, ಚರ್ಚ್ ಜೀವಂತ ಅಷ್ಟೆ ಏಕೆ ಸ್ಮಶಾನವೂ ಹೌದು” ಎಂಬ ಬರಹವಿರುವ ಪೋಸ್ಟರ್ ಅನ್ನು ಇಂದು (ನ 22) ಸಂಜೆ 6 ಗಂಟೆಗೆ ರಿಲೀಸ್ ಮಾಡಿದೆ.
ಇಂದಿನಿಂದ ಏಳು ದಿನಗಳವರೆಗೆ, ಪ್ರತಿ ಸಂಜೆ ಆರುಗಂಟೆಗೆ ‘ ತೋತಾಪುರಿ ತೊಟ್ಟು (ಪಾತ್ರಗಳ) ಗಳ ಪರಿಚಯ. ಮಾಡಿಕೊಡಲಿದೆ, ತೋತಾಪುರಿ 2 ಭಾಗಗಳಲ್ಲಿ ಬರಲಿದ್ದು ಭಾಗ-1 ಅತೀ ಶೀಘ್ರದಲ್ಲಿ ಬೆಳಿತೆರೆಗೆ ಬರಲಿದೆ.
ಹೌದು! ‘ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ’ ಎಂದು ಹೇಳಿರುವ ‘ತೋತಾಪುರಿ’ ಚಿತ್ರತಂಡ, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಟೈಟಲ್ ರಿವೀಲ್ ಮಾಡಿರುವ ಪೋಸ್ಟರನ್ನು ಚಿತ್ರದ ನಾಯಕ ಜಗ್ಗೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಿಂದೆ ಹಂಚಿಕೊಂಡಿದ್ರು. ಈಗ ಪಾತ್ರ ಪರಿಚಯವನ್ನ ಹೊಸಬಗೆಯಲ್ಲಿ ಹೇಳಲು ಹೊರಟಿರುವ ಚಿತ್ರ ತಂಡ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
****