ಪುನೀತ್ ರಾಜಕುಮಾರ್ ಅಗಲಿ ಇಂದಿಗೆ 24 ದಿನ ಕಳೆದಿವೆ. ಇನ್ನೂ ಅಪ್ಪು ಅಗಲಿದ ನೋವು ಮಾತ್ರ ಕಡಿಮೆಯಾಗಿಲ್ಲ. ಸದಾ ಪುನೀತ್ ನೆನೆಪಿನಲ್ಲಿ ಬದುಕುತ್ತಿರುವ ಅಭಿಮಾನಿಗಳ ಹೊಸ ಆಸೆಯೊಂದನ್ನು ಕನ್ನಡ ಚಿತ್ರರಂಗದ ನಿರ್ದೇಶಕರು ಈಡೇರಿಸಬೇಕಿದೆ. ಅದರಲ್ಲೂ ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ಮುಂದೆ ಅಪ್ಪು ಅಭಿಮಾನಿಗಳು ಹೊಸ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ಸಂತೋಷ್ ಆನಂದ್ ರಾಮ್ ಕೂಡ ಒಪ್ಪಿ ಮಾತು ಕೊಟ್ಟಿದ್ದಾರೆ.
ಅಪ್ಪು ನಮ್ಮನ್ನೆಲ್ಲಾ ಅಗಲಿದ್ದಾರೆ ಅನ್ನೋದನ್ನು ಯಾರು ನಂಬಲು ರೆಡಿಯಿಲ್ಲ. ಅದರಲ್ಲೂ ಅಭಿಮಾನಿಗಳಿಗಂತೂ ಇದು ಇನ್ನೂ ಒಂದು ಕೆಟ್ಟ ಕನಸು ಅಂತಲೇ ಭಾವಿಸಿದ್ದಾರೆ. ಆದರೂ, ನೋವನ್ನು ನುಂಗಿಕೊಂಡು ಅಪ್ಪು ಅಜರಾಮರನ್ನಾಗಿಸಲು ಮುಂದಾಗಿದ್ದಾರೆ. ಹೀಗಾಗಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಯುವರತ್ನ ನಿರ್ದೇಶಕ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ಪುನೀತ್ ರಾಜಕುಮಾರ್ ಗಾಗಿ ವರ್ಷಕ್ಕೊಂದು ಹಾಡು ಮಾಡಿ, ಅದೇ ನಮಗೆ ರಾಷ್ಟ್ರ ಗೀತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ಕೂಡ ಅಭಿಮಾನಿಗಳಿಗೆ ಮಾತು ನೀಡಿದ್ದಾರೆ.
****