52ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇಂದು (ನ 20) ಗೋವಾದ ಪಣಜಿಯಲ್ಲಿ ಆರಂಭವಾಗಲಿದೆ. ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿ ಸ್ವೀಕರಿಸಲಿರುವ ನಟಿ ಹೇಮಮಾಲಿನಿ ಮತ್ತು ಗೀತ ರಚನಕಾರ ಪ್ರಸೂನ್ ಜೋಶಿ, ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ . ರಾಜ್ಯಪಾಲ ಪಿ.ಎಸ್.ಶ್ರೀಧರನ್ ಫಿಳ್ಳೈ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತರಿರುತ್ತಾರೆ.
ಕಳೆದ ಬಾರಿ 2020 ನವೆಂಬರ್ ನಲ್ಲಿ ನಡೆಯಬೇಕಿದ್ದ ಚಿತ್ರೋತ್ಸವ 2021 ಜನವರಿಯಲ್ಲಿ ನಡೆದಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಗೋವಾ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚಿತ್ರೊತ್ಸವವನ್ನು ಸಂಘಟಿಸಲಾಗಿದೆ. 9 ದಿನಗಳ ಈ ಚಿತ್ರೋತ್ಸವ ಭಾರತೀಯ ಚಿತ್ರರಂಗದ ಚೇತರಿಕೆಗೆ ಸ್ಪೂರ್ತಿ ಆಗಲಿದೆ ಎಂಬ ನಿರೀಕ್ಷೆ ಇದೆ.
ಪನೋರಮಾ ವಿಭಾಗದಲ್ಲಿ ಕನ್ನಡದ ಡೊಳ್ಳು, ಆಕ್ಟ್ 1978, ತಲೆದಂಡ ಮತ್ತು ನೀಲಿ ಹಕ್ಕಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
****