ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 20 ದಿನ ಕಳೆದರೂ ಅವರಿಲ್ಲ ಎಂಬ ನೋವಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲಾ. ಸ್ಯಾಂಡಲ್ ವುಡ್ ನಲ್ಲಿ ಅಪ್ಪು ಅವರ ಅಗಲಿಕೆ ದೊಡ್ಡ ಕೊರತೆಯೊಂದನ್ನು ಸೃಷ್ಟಿ ಮಾಡಿದೆ. ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಪುನೀತ ನಮನ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ತಮಿಳು ನಟ ವಿಶಾಲ್ ಅವರು ಭಾಗವಹಿಸಿ. ಅಣ್ಣನಂತಿದ್ದ ಪುನೀತ್ ಅವರನ್ನು ಕಳೆದುಕೊಂಡು ಅಪಾರ ನೋವಿನಲ್ಲಿರುವ ವಿಶಾಲ್ ಪುಷ್ಪ ನಮನ ಸಲ್ಲಿಸಿದ್ರು.
ಇಂದು (ನ 17) ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶಾಲ್, ಅಶ್ವಿನಿ ಮೇಡಂ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ, ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ಸಮಾಜಿಕ ಕೆಲಸಗಳನ್ನು ಮುಂದುವರೆಸಲು ಅನುಮತಿ ಕೇಳಿದ್ದೇನೆ. 1800 ವಿದ್ಯಾರ್ಥಿಗಳ ಜವಬ್ದಾರಿಯನ್ನು ನಾನು ತೆಗೆದುಕೊಳ್ಳುವುದರ ಬಗ್ಗೆ ಮಾತನಾಡಿದ್ದಾನೆ, ಕೆಲವು ದಿನಗಳಲ್ಲಿ ಇದರ ಬಗ್ಗೆ ಅಭಿಪ್ರಾಯವನ್ನು ತಿಳಿಸುವುದಾಗಿ ಅಶ್ವಿನಿ ಮೇಡಂ ಅವರ ಅಭಿಪ್ರಾಯ ತಿಳಿಸಲಿದ್ದಾರೆ ಎಂದರು.

ಇದೇ ವೇಳೆ ಮತ್ತೆ ಪುನೀತ್ ಅವರನ್ನು ನೆನೆದು ಭಾವುಕರಾದ ನಟ ವಿಶಾಲ್ ಪುನೀತ್ ಇಲ್ಲವೆಂಬುದ್ದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲಾ, ಅವರನ್ನು ಕಳೆದುಕೊಂಡಿರುವುದು ಸಮಾಜಕ್ಕೆ ಮತ್ತು ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರೊಬ್ಬ ಒಳ್ಳೆಯ ನಟ ಮಾತ್ರವಲ್ಲ, ಒಳ್ಳೆಯ ವ್ಯಕ್ತಿ, ಒಬ್ಬ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದರು. ಇದಕ್ಕೂ ಮೊದಲು ಪುನೀತ್ ಮನೆಗೆ ಭೇಟಿ ನೀಡಿ ಶಿವಣ್ಣನಿಗೆ ಸಾಂತ್ವನ ಹೇಳಿದ್ದಾರೆ