ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಹಾಡಿನಿಂದ ಸಖತ್ ಸದ್ದು ಮಾಡ್ತಿದೆ. ಈ ಹಿಂದೆ ಮದಗಜ ಮೆಲೋಡಿ ಹಾಡಿನ ಮೂಲಕ ಗಮನ ಸೆಳೆದಿತ್ತು. ನಟ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್ ಕಾಣಿಸಿಕೊಂಡು ಮೆಲೋಡಿ ಲವ್ ಟ್ರ್ಯಾಕ್ ಸಿನಿಪ್ರಿಯರ ಮನ ಗೆದ್ದಿದೆ. ಗೆಳೆಯ ನನ್ನ ಗೆಳೆಯ ಅನ್ನೊ ಹಾಡಿನ ಬಳಿಕ ಈಗ ಮಸ್ತ್ ಮಾಸ್ ಹಾಡು ರಿಲೀಸ್ ಮಾಡಿದೆ ಚಿತ್ರತಂಡ.
ನವೆಂಬರ್ 12 ರಂದು ಸಾಂಗ್ ರಿಲೀಸ್ ಆಗಿದ್ದು, ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡನ್ನು 4 ಮಿಲಿಯನ್ ವೀಕ್ಷಣೆ ಕಂಡಿದೆ. ಸದ್ಯ ಸಿನಿಮಾ ಸೆನ್ಸಾರ್ ಬೋರ್ಡ್ ತಲುಪಿದೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಡಿಸೆಂಬರ್ 3 ರಂದು ಸಿನಿಮಾ ರಿಲೀಸ್ ಆಗಲಿದೆ.
ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾ1500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಮದಗಜ ಸಿನಿಮಾ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಭಾರೀ ಹಣಕ್ಕೆ ಮಾರಾಟವಾಗಿವೆ ಎಂದು ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.
****