ಪುನೀತ್ ಸರ್ ಇಲ್ಲಾ ಅನ್ನೋದನ್ನ ನನಗೆ ಇನ್ನು ನಂಬೋಕೆ ಆಗ್ತಿಲ್ಲಾ , ಇಲ್ಲಾ ಅವರು ಇಲ್ಲೆ ಇದಾರೆ ಅಂತಾನೆ ಅನ್ನಿಸ್ತಿದೆ. ಅವರ ಜೊತೆ ಕೆಲಸ ಮಾಡ್ಬೇಕು, ಅವರೊಂದಿಗೆ ನಟಿಸಬೇಕು ಅನ್ನುವಂತಹ ಕನಸು ಈಡೇರಲಿಲ್ಲಾ. ಅವರಿಲ್ಲಾ ಅನ್ನೋ ಸತ್ಯವನ್ನ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲಾ ಅಂತ ಆಶಿಕಾ ರಂಗನಾಥ್ ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಕುರಿತು ಕನ್ನಡ ಪಿಚ್ಚರ್ ಜೊತೆ ಮಾತನಾಡಿದ ಆಶಿಕಾ ರಂಗನಾಥ್ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದ್ರು. ಅಪ್ಪು ಸರ್ ಜೊತೆ ಅಭಿನಯಿಸು ಕನಸು ಪ್ರತಿಯೊಬ್ಬರಿಗೂ ಇದ್ದೆ ಇರತ್ತೆ, ಅದ್ರಲ್ಲಿ ನಾನೂ ಕೂಡ ‘ದ್ವಿತ್ವ’ ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸಬೇಕಿತ್ತು, ಅವರು ತೀರಿಕೊಂಡ ಹಿಂದಿನ ದಿನವೇ ಪವನ್ ಸರ್ ಅವರು “ದ್ವಿತ್ವ” ಚಿತ್ರದ ಕಥೆಯನ್ನು ಹೇಳಿದ್ರು, ಕಥೆ ಕೇಳುವಾಗ್ಲೆ ನಾನು ಪುನೀತ್ ಸರ್ ನ ಕಲ್ಪನೆ ಮಾಡ್ಕೋತಿದ್ದೆ ಇದ್ದಕ್ಕಿದ್ದ ಹಾಗೆ ಅಪ್ಪು ಸರ್ ಇಲ್ಲಾ ಅಂದ್ರೆ ಹೇಗಾಗುತ್ತೆ ಹೇಳಿ. ಯಾವಾಗ್ಲೂ ಫ್ಯಾನ್ಸ್ ಕೇಳೋರು ನೀವು ಡ್ಯಾನ್ಸ್ ಚೆನ್ನಾಗಿ ಮಾಡ್ತೀರಿ ಅಪ್ಪು ಸರ್ ಜೊತೆ ಸಿನಿಮಾ ಮಾಡಿ ಅಂತ ಹೇಳೋರು ಆದ್ರೆ ಯಾರ ಕನಸೂ ಈಡೇರಲಿಲ್ಲಾ ಎಂದು ನೋವಿನಿಂದ ಹೇಳ್ತಾರೆ ಆಶಿಕಾ.