ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್‌ಪೇಟೆ’ ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯವು ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೇಲರ್‌ನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಟ್ರೇಲರ್ ಪ್ರಾರಂಭದಲ್ಲಿ ಚಿತ್ರತಂಡ, ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದಿದ್ದಾರೆ. ಹಾಗೂ ಚಿತ್ರದ ಟ್ರೇಲರ್‌ಗೆ ಸಿನಿರಸಿಕರು ಬೊಂಬಾಟ್ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
‘ಮುಗಿಲ್‌ಪೇಟೆ’ ಚಿತ್ರದ ಟ್ರೇಲರ್‌ನಲ್ಲಿ, ಮನುರಂಜನ್ ಮಾಸ್ ಎಂಟ್ರಿ, ಫೈಟ್ಸ್, ನವೀರಾದ ಪ್ರೇಮಕಥೆ, ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ಒಂದು ಕೌಟುಂಬಿಕ ಚಿತ್ರಕ್ಕೆ ಬೇಕಾದಂತಹ ಅದ್ಭುತ ಕಥೆಯನ್ನೊಳಗೊಂಡಿದೆ. ಟ್ರೈಲರ್ ನಲ್ಲಿ ಡೈಲಾಗ್ ಗಳ ದರ್ಬಾರು ಜೋರಾಗೆ ಇದೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ನಟಿ ತಾರಾ ಸುಶೀಲಾ ಪಾತ್ರದಲ್ಲಿ, ಅವಿನಾಶ್ ರಾಮನಾಥನಾಗಿ, ಸಾಧುಕೋಕಿಲಾ ಜಿಲೇಬಿಯಾಗಿ, ರಂಗಾಯಣ ರಘು ಭಾಗವತರಾಗಿ, ರಿಷಿ ಗೌತಮ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ಕಯಾದು ಲೋಹರ್ ಅಪೂರ್ವ ಪಾತ್ರಕ್ಕೆ ಬಣ್ಣ ಹಚ್ಚಿದರೆ ಮನುರಂಜನ್ ರಾಜನಾಗಿ ಅಭಿನಯಿಸಿದ್ದಾರೆ.. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. ‘ಮುಗಿಲ್‌ಪೇಟೆ’ ಚಿತ್ರವು ಇದೇ ತಿಂಗಳ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
****