ನಟ ದುನಿಯಾ ವಿಜಯ್ ಅಭಿನಯದ ಸಲಗ ಅದ್ದೂರಿ ಯಶಸ್ಸು ಕಂಡು ಸದ್ಯ ಗೆಲುವಿನ ನಗೆ ಬೀರಿದೆ. ಸಲಗ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ಬಂದು ನಿರೀಕ್ಷೆಯ ಮಟ್ಟ ತಲುಪಿ ಯಶಸ್ಸು ಸಾಧಿಸಿದ ಸಿನಿಮಾ. ನಟ ದುನಿಯಾ ವಿಜಯ್ ನಿರ್ದೇಶನಕ್ಕೆ ಇಳಿದು ಅಂದುಕೊಂಡಂತೆಯೇ ಸಿನಿಮಾ ನಿರ್ದೇಶನ ಮಾಡಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಚಿತ್ರದ ಹಾಡಿಗೆ ಬೇಡಿಕೆ ಹೆಚ್ಚಾಗಿದೆ. ಚಿತ್ರದ ಪ್ರೊಮೋಷನ್ ಗಾಗಿ ಚಿತ್ರ ತಂಡ ಟಿಣಿಂಗ ಮಿಣಿಂಗ ಎನ್ನುವ ಸಾಂಗ್ ಮಾಡಿದೆ.
ಈ ಹಾಡು ಈಗ ಚಿತ್ರದ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಟಿಣಿಂಗ ಮಿಣಿಂಗ ಹಾಡು ಕೇವಲ ಸಿನಿಮಾದ ಪ್ರಮೋಷನ್ಗಾಗಿ ಮಾಡಿದ ಹಾಡು. ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ ಈ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೆಷ್ಟೋ ಜನ ಈ ಹಾಡನ್ನು ಇಷ್ಟಪಟ್ಟೆ ಸಿನಿಮಾ ನೋಡಲು ಹೋಗಿದ್ದರು. ಆದರೆ ಈ ಹಾಡು ಸಂಪೂರ್ಣವಾಗಿ ಚಿತ್ರದಲ್ಲಿ ಅಳವಡಿಸಿರಲಿಲ್ಲ ಚಿತ್ರ ತಂಡ. ಆದರೆ ಈಗ ಈ ಹಾಡನ್ನು ಬಿಗ್ ಸ್ಕ್ರೀನ್ ಮೇಲೆ ನೋಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಚಿತ್ರತಂಡ ಮತ್ತೆ ಈ ಹಾಡನ್ನು ಚಿತ್ರದಲ್ಲಿ ಸೇರಿಸಿ ರಿಲೀಸ್ ಮಾಡಲು ಮುಂದಾಗಿದೆ. ಈ ಹಾಡನ್ನು ಸೇರಿಸಿದ ಬಳಿಕ ಇದೇ ನವೆಂಬರ್ 19 ರಿಂದ ಸಲಗ ಮತ್ತೆ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಿಗೆ ಎಂಟ್ರಿ ಕೊಡುತ್ತಿದೆ.
****