ಇಂದು ದೇಶದಾದ್ಯಂತ ದಿ. ಜಹವರ್ ಲಾಲ್ ನೆಹರು ಅವರ ಜನ್ಮ . ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಎಲ್ಲಾ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾ ಮೂಲಕ ಮಕ್ಕಳಿಗೆ ಶುಭ ಹಾರೈಸುತ್ತಿದ್ದಾರೆ. ಇವೆಲ್ಲದರ ನಡುವೆ ಪುನೀತ್ ರಾಜಕುಮಾರ್ ಇಲ್ಲಾ ಎನ್ನುವ ನೋವು ಎಲ್ಲರನ್ನು ಕಾಡುತ್ತಿದೆ. ಪುನೀತ್ ರಾಜ್ಕುಮಾರ್ ಕಳೆದ ವರ್ಷ ಅವರು ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ, ಅವರು ಮಕ್ಕಳ ದಿನಾಚರಣೆಗೆ ವಿಶ್ ಮಾಡಿದ್ದ ವಿಡಿಯೋ ಕೂಡ ಇಂದು (ನ.14) ಸಖತ್ ವೈರಲ್ ಆಗುತ್ತಿದೆ. ಅದನ್ನು ನೋಡಿದಾಗ ಮತ್ತೆ ಅಪ್ಪು ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.
ಆದರೆ ಈ ಬಾರಿ ಎಂದಿನಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭಾಶಯವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪ್ಪು ಫ್ಯಾನ್ಸ್ ಅವರ ಮಕ್ಕಳಾದ ಧೃತಿ, ವಂದಿತಾಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಪ್ಯಾನ್ಸ್, ಇಬ್ಬರು ಮಕ್ಕಳಿಗೆ ಸಂದೇಶ ನೀಡಿದ್ದು, ನಿಮ್ಮ ಜೊತೆಗೆ ನಾವಿದ್ದೇವೆ, ನೀವು ಧೃತಿಗೆಡಬೇಡಿ ಎಂದು ಸಾಂತ್ವನ ಹೇಳಿದ್ದಾರೆ.
ಅಪ್ಪು ಎಂದರೆ ಎಲ್ಲ ವಯಸ್ಸಿನವರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಪುನೀತ್ ಹಾಡು ಮತ್ತು ಸಿನಿಮಾಗಳು ರುಚಿಸುತ್ತಿದ್ದವು. ಪುನೀತ್ ನಿಧನರಾದರು ಎಂಬ ಸುದ್ದಿ ಗೊತ್ತಾಗಾದ ಅನೇಕ ಮಕ್ಕಳು ಕಣ್ಣೀರು ಹಾಕಿದ ಬಗ್ಗೆ ವರದಿ ಆಗಿತ್ತು. ಅಪ್ಪು ಮೇಲೆ ಅವರು ಇಟ್ಟಿದ್ದ ಅಭಿಮಾನ, ಪ್ರೀತಿಗೆ ಆ ಕಣ್ಣೀರು ಸಾಕ್ಷಿ. ಅದೇ ರೀತಿ ವೃದ್ಧರಿಗೂ ಪುನೀತ್ ಎಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ವೃದ್ಧೆಯೊಬ್ಬರು ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ವಿಡಿಯೋ ಸಹ ವೈರಲ್ ಆಗಿತ್ತು.